ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸಿದೆ.
ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಯೋಜನೆಗಳು:
ರಸ್ತೆ ಮೂಲಸೌಕರ್ಯ: 40 ಕಿ.ಮೀ ಉದ್ದದ ದ್ವಿಪಥ ಸುರಂಗ ಮಾರ್ಗ, 120 ಕಿ.ಮೀ ಎತ್ತರಿಸಿದ ಕಾರಿಡಾರ್, 500 ಕಿ.ಮೀ ಹೊಸ ರಸ್ತೆ ಸಂಪರ್ಕ ಹಾಗೂ 1500 ಕಿ.ಮೀ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಉನ್ನತೀಕರಣ.
ಪ್ರಮುಖ ರಸ್ತೆ ಯೋಜನೆಗಳು: 17 ಕಿ.ಮೀ ಹೊರವರ್ತುಲ ರಸ್ತೆಯ ಮರು ಅಭಿವೃದ್ಧಿ, 37 ಕಿ.ಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣದ ಪ್ರಸ್ತಾವನೆ ಮತ್ತು ನಗರದ ಹೊರವಲಯದಲ್ಲಿ 18 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿ.
ಮೆಟ್ರೋ ವಿಸ್ತರಣೆ: 2027ರ ವೇಳೆಗೆ ಮೆಟ್ರೋ ಜಾಲವನ್ನು ಪ್ರಸ್ತುತ 96 ಕಿ.ಮೀ ನಿಂದ 170 ಕಿ.ಮೀ.ಗೆ ವಿಸ್ತರಿಸುವ ಗುರಿ.
ಸಾರ್ವಜನಿಕ ಸಾರಿಗೆ: ಪ್ರಸ್ತುತ ಇರುವ 7,000 ಬಸ್ಗಳ ಪಡೆಯ ಜತೆಗೆ ಹೊಸದಾಗಿ 4,500 ಬಸ್ಗಳ ಸೇರ್ಪಡೆ ಹಾಗೂ 2030ರ ವೇಳೆಗೆ 150 ಕಿ.ಮೀ ಸಬ್ ಅರ್ಬನ್ ರೈಲು ಸಂಪರ್ಕ ಅಭಿವೃದ್ಧಿ.
ನೀರು ಸರಬರಾಜು: ಬೆಂಗಳೂರಿನ ಹೆಚ್ಚುತ್ತಿರುವ ನೀರಿನ ಬೇಡಿಕೆಯನ್ನು ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನ.
ನಗರ ಮೂಲಸೌಕರ್ಯ: ಜಿಬಿಎ (GBA) ವ್ಯಾಪ್ತಿಯಿಂದ ಹೊರಗಿರುವ 65 ನಗರೀಕರಣಗೊಂಡ ಗ್ರಾಮ ಪಂಚಾಯಿತಿಗಳಲ್ಲಿ ಹಂತ-ಹಂತವಾಗಿ ಕುಡಿಯುವ ನೀರು, ಒಳಚರಂಡಿ ಮತ್ತು ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ.
ಕಸ ನಿರ್ವಹಣೆ: ಹೊಸ ಟೆಂಡರ್ ಪ್ರಕ್ರಿಯೆ, ವಾಹನಗಳಿಗೆ ಕಡ್ಡಾಯ ಜಿಪಿಎಸ್ ಅಳವಡಿಕೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯ ಮೂಲಕ ಕಸ ವಿಲೇವಾರಿ ವ್ಯವಸ್ಥೆಯನ್ನು ಬಲಪಡಿಸುವುದು.
ದೀರ್ಘಕಾಲೀನ ಅಭಿವೃದ್ಧಿ: 2037ರ ವೇಳೆಗೆ ಬೆಂಗಳೂರು ನಿರ್ಮಾಣವಾಗಿ 500 ವರ್ಷಗಳಾಗಲಿರುವ ಹಿನ್ನೆಲೆಯಲ್ಲಿ, ಮುಂದಿನ 10 ವರ್ಷಗಳ ಅಭಿವೃದ್ಧಿಗೆ ಅಂದಾಜು 1 ಲಕ್ಷ ಕೋಟಿ ರೂ. ವೆಚ್ಚದ ಯೋಜನೆ.
ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನವನ್ನು ಒದಗಿಸಿ, ಉತ್ತಮ ಸಂಪರ್ಕ, ಸ್ವಚ್ಛ ಹಾಗೂ ಭವಿಷ್ಯಕ್ಕೆ ಸಜ್ಜಾದ ನಗರವನ್ನಾಗಿ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
Chaired a meeting with Bengaluru’s MLAs and MLCs today to review the city’s infrastructure priorities, ongoing projects and future development plans.
We are prioritising a major infrastructure push, including 40 km of tunnel corridors, 120 km of elevated corridors, 500 km of new road connections, upgrades to 1,500 km of arterial and sub-arterial roads, redevelopment of the 17 km Outer Ring Road and a proposed 37 km double-decker road. We are also expanding the Metro network from 96 km to 170 km by 2027, adding 4,500 buses and developing 150 km of suburban rail connectivity by 2030.
Our plans include additional Cauvery water supply, phased upgrades of 65 urbanised gram panchayats outside GBA limits, improved waste management and a 10-year development roadmap ahead of Bengaluru’s 500th anniversary in 2037, with an estimated investment of ₹1 lakh crore.
We are committed to ensuring fair and balanced development across all constituencies, with adequate funding and timely implementation of priority works. Our commitment is to build a better-connected, cleaner and future-ready Bengaluru.
Chaired a meeting with Bengaluru’s MLAs and MLCs today to review the city’s infrastructure priorities, ongoing projects and future development plans.
We are prioritising a major infrastructure push, including 40 km of tunnel corridors, 120 km of elevated corridors, 500 km of new road connections, upgrades to 1,500 km of arterial and sub-arterial roads, redevelopment of the 17 km Outer Ring Road and a proposed 37 km double-decker road. We are also expanding the Metro network from 96 km to 170 km by 2027, adding 4,500 buses and developing 150 km of suburban rail connectivity by 2030.
Our plans include additional Cauvery water supply, phased upgrades of 65 urbanised gram panchayats outside GBA limits, improved waste management and a 10-year development roadmap ahead of Bengaluru’s 500th anniversary in 2037, with an estimated investment of ₹1 lakh crore.
We are committed to ensuring fair and balanced development across all constituencies, with adequate funding and timely implementation of priority works. Our commitment is to build a better-connected, cleaner and future-ready Bengaluru.
I welcome the move by pharmaceutical companies to cut the MRPs of anti-cancer medicines. Revised price lists are now being notified, with some drugs becoming cheaper by nearly 70% from November 9.
A bevacizumab 400 mg injection comes down from ₹42,000 to ₹13,136. One cycle of palbociclib drops from ₹9,787 to ₹3,147. Many patients who took loans or mortgaged their property to pay for treatment will now carry a lighter burden.
I urge every pharma company to complete this process quickly and transparently. Stockists, chemists and hospitals must pass on the full benefit to patients in need at the earliest.
Karnataka's Health Department @DHFWKA will continue to closely monitor the prices of medicines for critical illnesses such as cancer, heart and kidney diseases.
Affordable treatment is the right of every person in need, and we will keep working to make it a reality for every family.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ನಿಯೋಗವು ನನ್ನನ್ನು ಭೇಟಿಯಾಗಿ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿತು.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸಿದೆ.
ಈ ಸಭೆಯಲ್ಲಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಶ್ರೀ ರಿಜ್ವಾನ್ ಅರ್ಷದ್, ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್, ಶ್ರೀ ಎ.ಸಿ.ಶ್ರೀನಿವಾಸ್, ಶ್ರೀ ಅಶ್ವತ್ಥ್ ನಾರಾಯಣ, ಶ್ರೀ ಎಸ್.ಟಿ. ಸೋಮಶೇಖರ್, ಶ್ರೀ ಬೈರತಿ ಬಸವರಾಜ್, ಶ್ರೀ ಸತೀಶ್ ರೆಡ್ಡಿ, ಶ್ರೀಮತಿ ಮಂಜುಳಾ ಅರವಿಂದ್ ಲಿಂಬಾವಳಿ, ಶ್ರೀ ಎಸ್.ಆರ್. ವಿಶ್ವನಾಥ್, ಶ್ರೀ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯರಾದ ಶ್ರೀ ವಿನಯ್ ಕಾರ್ತಿಕ್, ಶ್ರೀ ಗೋವಿಂದರಾಜು, ಶ್ರೀ ಟಿ.ಎ.ಶರವಣ, ಅಪರ ಮುಖ್ಯ ಕಾರ್ಯದರ್ಶಿ ಶ್ರೀ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನವಕರ್ನಾಟಕ MRW/ VRW/ URW ಗೌರವಧನ ಕಾರ್ಯಕರ್ತರ ಸಂಘದ ನಿಯೋಗವು ನನ್ನನ್ನು ಭೇಟಿ ಮಾಡಿ, ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿತು.
ಈ ವೇಳೆ ಸಂಘದ ಸಂಸ್ಥಾಪಕರಾದ ಶ್ರೀ ಅಂಬಾಜಿ ಪಿ. ಮೇಟಿ, ರಾಜ್ಯಾಧ್ಯಕ್ಷರಾದ ಶ್ರೀ ಫಕೀರಗೌಡ ಪಾಟೀಲ, ಸಂಚಾಲಕರಾದ ಶ್ರೀ ಅನಿಲ್ ಕೆ. ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್, ಹಣಕಾಸು ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಅಭಿರಾಮ್ ಶಂಕರ್, ವಿಕಲಚೇತನರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀ ಮಹೇಶ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಯೋಜಿಸಿದ್ದ ʻಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ - 2026’ ಪಂದ್ಯಾವಳಿಯನ್ನು ಉದ್ಘಾಟಿಸಿ, ಆಟಗಾರರಿಗೆ ಶುಭಹಾರೈಸಿದೆ.
ಇದೇ ವೇಳೆ ನನ್ನ ರಾಜಕೀಯ ಗುರುಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪನವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದೆ. ಎಸ್. ಬಂಗಾರಪ್ಪನವರು ಕೂಡ ಅತ್ಯುತ್ತಮ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿದ್ದರು. ಜೊತೆಗೆ ಸಾವಿರಾರು ಕ್ರೀಡಾಪಟುಗಳಿಗೂ ಸ್ಪೂರ್ತಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ (KBA) ಅಧ್ಯಕ್ಷರಾದ ಕುಮಾರ್ ಬಂಗಾರಪ್ಪ ಮತ್ತು ನಾಡಿನ ಹೆಮ್ಮೆಯ ಕ್ರೀಡಾಪಟು ಎಂ. ಆರ್. ಪೂವಮ್ಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Inaugurated the ‘India International Challenge 2026’ badminton tournament organised by the Karnataka Badminton Association in Bengaluru and extended my best wishes to all the participating players.
On the occasion, I paid my heartfelt tributes to my political mentor and former Chief Minister, Shri S. Bangarappa, by offering floral respects to his portrait. A distinguished badminton player himself, he inspired thousands of sportspersons and left a lasting legacy in the world of sports.
Former Minister and President of the Karnataka Badminton Association, Shri Kumar Bangarappa, renowned athlete M.R. Poovamma, and several other dignitaries were present at the event.
ಕಬ್ಬು ಬೆಳೆಗಾರರಿಗೆ ನ್ಯಾಯದ ಭರವಸೆ; ಎರಡು ದಿನಗಳಲ್ಲಿ ಅಂತಿಮ ನಿರ್ಧಾರ
ನನ್ನ ಮಧ್ಯಸ್ಥಿಕೆಯಲ್ಲಿ ಕಬ್ಬು ಬೆಳೆಗಾರ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ನಿಗದಿಪಡಿಸಿದ ಬಳಿಕ, ಅದರ ಆಧಾರದಲ್ಲಿ ರೈತರಿಗೆ ಪಾವತಿಸಬೇಕಾದ ಕಬ್ಬಿನ ದರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ರೈತರು ಹಾಗೂ ಕಾರ್ಖಾನೆಗಳ ಮಾಲೀಕರು ಇನ್ನೆರಡು ದಿನಗಳಲ್ಲಿ ತಮ್ಮ ಅಂತಿಮ ನಿಲುವು ಪ್ರಕಟಿಸಲಿದ್ದಾರೆ.
ಬೆಳಗಾವಿಯ ಸುವರ್ಣ ಸೌಧ ಹಾಗೂ ಸರ್ಕ್ಯೂಟ್ ಹೌಸ್ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜೊತೆಗೆ ಇಡೀ ದಿನ ಐದು ಸುತ್ತಿನ ಸರಣಿ ಸಭೆಗಳನ್ನು ನಡೆಸಲಾಯಿತು. ಈ ಸಭೆಯಲ್ಲಿ 9 ಮಂತ್ರಿಗಳು ಸೇರಿ 70 ಜನ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆ ಮಾಲೀಕರು ಭಾಗಿಯಾಗಿದ್ದು, ರೈತರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರು ಕೇಂದ್ರ ಸಚಿವರ ಜತೆ ಚರ್ಚೆ ಮಾಡಿದ್ದು, ರೈತರಿಗೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಕಬ್ಬಿನ ಎಂಎಸ್ಪಿ ನಿಗದಿ ಬಳಿಕ ಕಾರ್ಖಾನೆಗಳು ರೈತರಿಗೆ ಎಷ್ಟು ದರ ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಗಿದೆ. ಇದಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ.
ರೈತರು ಉಳಿಯಬೇಕು, ಕಾರ್ಖಾನೆಯೂ ಉಳಿಯಬೇಕು. ಸರ್ಕಾರಕ್ಕೆ ರೈತರ ಬದುಕು ಮುಖ್ಯ. ರೈತರು ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅವರು ತಮ್ಮಲ್ಲೇ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಿದ್ದಾರೆ. ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರಕ್ಕೆ ಬಂದಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ಜೊತೆಗೆ ಅವರೂ ಮಾತನಾಡುತ್ತಾರೆ, ನಾವೂ ಮಾತನಾಡುತ್ತೇವೆ.
ಸದ್ಯ ಈ ಹೋರಾಟ ಸುಖಾಂತ್ಯ ಕಂಡಿದೆ. ನಾವು ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಯಾವುದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬದ್ಧನಾಗಿದ್ದೇನೆ. ಕೇಂದ್ರ ಸಚಿವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂಬ ಭರವಸೆ ರೈತರಿಗಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ರೈತರಿಲ್ಲದೆ ನಾವಿಲ್ಲ, ನಾವಿಲ್ಲದೆ ರೈತರಿಲ್ಲ. ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ.
My heartfelt tributes to former President Shri K. R. Narayanan on his birth anniversary. Having served India as a diplomat, Union Minister, Vice President and President, he brought a rare breadth of experience to his responsibilities and upheld the dignity of the Constitution. His enduring contribution lies in reminding us that democracy finds its fullest meaning when the voices, rights and aspirations of the most marginalised are equally valued.
ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಬೆಳಗಾವಿಯ ಸರ್ಕ್ಯೂಟ್ ಹೌಸ್ನಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪ್ರತಿನಿಧಿಗಳೊಂದಿಗೆ ಇಂದು ಜಂಟಿ ಸಭೆ ನಡೆಸಿದೆ.
ಈ ಸಭೆಯಲ್ಲಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಲಕ್ಷ್ಮಣ್ ಸವದಿ, ಶ್ರೀ ಸಂತೋಷ್ ಲಾಡ್, ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ್, ಶ್ರೀ ಎನ್.ಎಚ್. ಕೋನರೆಡ್ಡಿ, ರೈತ ಮುಖಂಡರಾದ ಶ್ರೀ ಬಡಗಲಪುರ ನಾಗೇಂದ್ರ, ಶ್ರೀ ಚೂನಪ್ಪ ಪೂಜಾರಿ, ಶ್ರೀ ಕುರುಬೂರು ಶಾಂತಕುಮಾರ್, ಶ್ರೀ ಚುಕ್ಕಿ ನಂಜುಂಡಸ್ವಾಮಿ, ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಶ್ರೀ ಸಂಗಮೇಶ್ವರ ನಿರಾಣಿ, ಶ್ರೀ ಯೋಗೀಶ್ ಪಾಟೀಲ್, ಶ್ರೀ ಚನ್ನರಾಜ್ ಹಟ್ಟಿಹೊಳಿ, ಶ್ರೀ ವಿವೇಕ್ ಹೆಬ್ಬಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವಂತೆ ಮಾಡುವುದು ನಮ್ಮ ಅಚಲ ನಿರ್ಧಾರ
ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆ ಚರ್ಚೆ ಮಾಡಿದ್ದೇವೆ. ನಾವು ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಕ್ಕರೆ ಎಂಎಸ್ಪಿ ಏರಿಕೆಯಾಗದೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪುವುದಿಲ್ಲ. ರೈತರು ಕಬ್ಬು ಅರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ರೈತರಿಗೆ ತೊಂದರೆಯಾಗುತ್ತದೆ.
ನಾನು ಆತುರದ ತೀರ್ಮಾನ ಮಾಡುವುದಿಲ್ಲ: 29ರಂದು ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಒಂದೇ ದಿನದಲ್ಲಿ ನಾನು ಆತುರದ ತೀರ್ಮಾನ ಮಾಡುವುದಿಲ್ಲ. ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ಮಾಲೀಕರು, ಅಧಿಕಾರಿಗಳು, ಕೇಂದ್ರ ಸರ್ಕಾರ ಹಾಗೂ ಸಮಿತಿ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇದಕ್ಕೆ ಸಹಕಾರ ನೀಡಿ ಎಂದು ನಾನು ರೈತರಿಗೆ ಮನವಿ ಮಾಡಿದ್ದೇನೆ.
ನಾವು ರೈತರ ಪರವಾಗಿರುವಾಗ ಪ್ರತಿಭಟನೆ ಯಾಕೆ? ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ, ಕೇಂದ್ರ ಸಚಿವರ ಜತೆಗೂ ಚರ್ಚಿಸುವೆ. ಮಹಾರಾಷ್ಟ್ರ ಸಿಎಂ ಅವರನ್ನು ಭೇಟಿ ಮಾಡುವೆ. ನಮ್ಮ ರಾಜ್ಯದವರೆಲ್ಲ ಸೇರಿ ಒಟ್ಟಾಗಿ ತೀರ್ಮಾನ ಮಾಡಬೇಕಿದೆ.
ಕಬ್ಬು ಅರೆಯಲು ಅವಕಾಶ ನೀಡಲು ರೈತರಿಗೆ ಮನವಿ: ಸಕ್ಕರೆ ಕಾರ್ಖಾನೆ ಆರಂಭ ವಿಚಾರವಾಗಿ ಮನವಿ ಮಾಡುತ್ತೇನೆ. ಕಬ್ಬು ಅರೆಯುವುದು ಆರಂಭವಾಗಲಿ. ಈಗಾಗಲೇ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವುದು ಆರಂಭವಾಗಿದೆ. ನಮ್ಮ ಕಬ್ಬು ಬೆಳೆ ಮಹಾರಾಷ್ಟ್ರಕ್ಕೆ ಹೋಗುವುದಕ್ಕೆ ಅವಕಾಶ ನೀಡುವುದು ಬೇಡ. ಇದರಿಂದ ರೈತರು ಹಾಗೂ ಸರ್ಕಾರಕ್ಕೆ ತೊಂದರೆಯಾಗುತ್ತದೆ.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ನಾವು ಮಹಾರಾಷ್ಟ್ರ ಸಿಎಂ ಜೊತೆ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಸಮಿತಿ ರಾಜ್ಯಕ್ಕೆ ಬಂದಾಗ ಅದರ ಮುಂದೆ ನಾನು ಬರುತ್ತೇನೆ, ಕಬ್ಬು ಬೆಳೆಗಾರರ ಪರವಾಗಿ ನಾನು ಮಾತನಾಡುತ್ತೇನೆ.
ಸಕ್ಕರೆ ಎಂಎಸ್ಪಿ ಹೆಚ್ಚಾಗುವವರೆಗೂ ನಾವು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಇದು ಆತುರ, ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರ ಅಲ್ಲ. ನಿಮ್ಮ ಧ್ವನಿ ನನ್ನ ಧ್ವನಿಯಾಗುತ್ತದೆ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನ್ನ ಹಾಗೂ ಸರ್ಕಾರದ ಪರಿಸ್ಥಿತಿ ಅರಿಯಬೇಕು. ನಾವು ನಿಮ್ಮ ಪರವಾಗಿ ವಾದ ಮಾಡಲು ಸಿದ್ಧವಿದ್ದೇವೆ.
ನಿಮ್ಮ ಹೋರಾಟಕ್ಕೆ ಗೌರವ ನೀಡಿ ನಾನೇ ನಿಮ್ಮನ್ನು ಕಿತ್ತೂರಿನಲ್ಲಿ ಭೇಟಿ ಮಾಡಿದೆ. ಅಂದು ನಾನು ಎಲ್ಲರ ಜೊತೆ ಚರ್ಚೆ ಮಾಡಿ ನಿಮ್ಮ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದೆ. ಅದರಂತೆ ಇಂದು ಸಭೆ ಕರೆದಿದ್ದೇನೆ. ಕಳೆದ ವರ್ಷ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡಿ 300 ರೂ. ನೀಡಲು ತೀರ್ಮಾನಿಸಿದೆವು. ನಿಮ್ಮ ಬೇಡಿಕೆ ತಪ್ಪಿಲ್ಲ. ಡೀಸೆಲ್, ರಸಗೊಬ್ಬರ, ಕೀಟನಾಶಕ ಬೆಲೆ ಹೆಚ್ಚಾಗಿದೆ. ಸಕ್ಕರೆ ಬೆಲೆ ಏರಿಕೆಯಾಗಿಲ್ಲ. ನಾವು ರಾಜಕಾರಣ ಮಾಡಿ ಜಗಳವಾಡಿದರೆ ಪರಿಹಾರ ಸಿಗಲ್ಲ.
ರೈತರ ಬದುಕಿನ ಬಗ್ಗೆ ನನಗೆ ಅರಿವಿದೆ. ನಿಮಗೆ ಸಹಾಯ ಮಾಡಬೇಕು ಎಂದು ಜನಪ್ರತಿನಿಧಿಗಳು ಬಂದಿದ್ದಾರೆ. ಕಬ್ಬು ಇಳುವರಿ ಹಾಗೂ ಸಕ್ಕರೆ ಉತ್ಪಾದನೆ ಕುಸಿದಿದೆ. ಎಥನಾಲ್ ಉತ್ಪಾದನೆಗೆ ಕಬ್ಬು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇತ್ತ ಸಕ್ಕರೆ ಎಂಎಸ್ಪಿ ಏರಿಕೆಯಾದರೆ ನಾವು ನೀಡುತ್ತೇವೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ. ಸರ್ಕಾರದ ಹಣಕಾಸಿನ ಪರಿಸ್ಥಿತಿ ನೋಡಿ ಬೇಡಿಕೆ ಇಡಬೇಕು. ಇಂದೇ ಸಿಹಿ ಸುದ್ದಿ ನೀಡಿ ಎಂದರೆ ಎಲ್ಲಿಂದ ಹಣ ನೀಡೋಣ?
- ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪ್ರತ್ಯೇಕವಾಗಿ ನಡೆಸಿದ ಸಭೆಗಳು, ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸಭೆಗಳು ಹಾಗೂ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯ ಪ್ರಮುಖ ಅಂಶಗಳು.
ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಬೆಳಗಾವಿಯ ಸರ್ಕ್ಯೂಟ್ ಹೌಸ್ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಇಂದು ಎರಡನೇ ಸುತ್ತಿನ ಚರ್ಚೆ ನಡೆಸಿದೆ.
ಈ ಚರ್ಚೆಯಲ್ಲಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಲಕ್ಷ್ಮಣ್ ಸವದಿ, ಶ್ರೀ ಸಂತೋಷ್ ಲಾಡ್, ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ್, ಶ್ರೀ ಎನ್.ಎಚ್. ಕೋನರೆಡ್ಡಿ, ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಣಿ ಚೆನ್ನಮ್ಮನ ಧೈರ್ಯ ಪ್ರತಿ ಪೀಳಿಗೆಗೆ ಸ್ವಾಭಿಮಾನದ ಪಾಠ
ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣಗಳು.
ಸವದತ್ತಿ ಕ್ಷೇತ್ರಕ್ಕೆ ಅಭಿವೃದ್ಧಿಯ ಪರ್ವ
ಇಂದು ಬೆಳಗಾವಿ ಜಿಲ್ಲೆಯ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದೆನು.
ಈ ಸಂದರ್ಭದಲ್ಲಿ ಸಚಿವರು, ಸಂಸದರು, ಶಾಸಕರು, ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಓಂ ರೇಣುಕಾಯೈ ನಮಃ | ಜಗಜ್ಜನನ್ಯೈ ನಮಃ
ಭಕ್ತ ರಕ್ಷಾಯೈ ನಮಃ | ಯಲ್ಲಮ್ಮ ದೇವ್ಯೈ ನಮಃ
ಇಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಉಗರಗೋಳ ಪವಿತ್ರ ಕ್ಷೇತ್ರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ.






















































