ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState) header
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState) profile picture

Progress is Clear, but there's more to do: Let's speed up efforts!

Dairy Circle,Bangalore-560029.
Joined July 2019
Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)
ಮಕ್ಕಳ ಸಹಾಯವಾಣಿ 1098ಗೆ ಸಲ್ಲಿಕೆಯಾದ ದೂರಿನ ಮೇರೆಗೆ ತಪಾಸಣೆ ಕೈಗೊಳ್ಳಲಾಯಿತು. ಸಮಯದಲ್ಲಿ 2 ಅಪ್ರಾಪ್ತ ಬಾಲಕರು ಪೈಪ್ ಲೈನ್ ಅಗೆಯುವ ಕೆಲಸದಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿದ್ದು 2ರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪಾಲಕರ ವಶಕ್ಕೆ ಒಪ್ಪಿಸಲಾಗಿದೆ.
12
ರಾಯಚೂರು ತಾಲೂಕಿನ ಮಿಟ್ಟಿ ಮಲ್ಕಾಪೂರ ಗ್ರಾಮ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ/ಹಠಾತ್ ದಾಳಿ ಹಮ್ಮಿಕೊಳ್ಳಲಾಯಿತು. ಸಂದರ್ಭದಲ್ಲಿ 2 ಬಾಲಕಿಯರು ಕೃಷಿ ಕೆಲಸಕ್ಕೆ ಹೋಗುತ್ತಿರುವುದು ಕಂಡು ಬಂದಿರುತ್ತದೆ. ಮಕ್ಕಳನ್ನು ಕೆಲಸಕ್ಕೆ ಹೋಗದಂತೆ ತಡೆದು ಅವರು ವಿದ್ಯಾಭ್ಯಾಸ ಮಾಡುತ್ತಿದ್ದ ಶಾಲೆಗೆ ಮರು ದಾಖಲಿಸಲಾಯಿತು.
7
ಹಿರೇಕೆರೂರ ತಾಲ್ಲೂಕಿನ ಕೊಡ ಗ್ರಾಮಕ್ಕೆ ಭೇಟಿ ನೀಡಿ 18 ವರ್ಷದೊಳಗಿನ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳು ಕೆಲಸ ಮಾಡುತ್ತಿರುವ ಬಗ್ಗೆ ತಪಾಸಣೆ ನಡೆಸಿ ನಂತರ ಕೊಡ ಗ್ರಾಮದ ಮಾರುತಿ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಬಾಲಕಾರ್ಮಿಕ ಮತ್ತು ಕಿಶೋರ ಪದ್ಧತಿ (ನಿಷೇದ ಮತ್ತು ನಿಯಂತ್ರಣ ) ಕಾಯ್ದೆ-1986 ಕುರಿತು ಅರಿವು ಮೂಡಿಸಲಾಯಿತು.
11
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ/ಹಠಾತ್ ದಾಳಿ ಹಮ್ಮಿಕೊಳ್ಳಲಾಯಿತು. ಸದರಿ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕಿನ ಯರಡೋಣ ಗ್ರಾಮದ ವ್ಯಾಪ್ತಿಯಲ್ಲಿ ವ್ಯಾಪ್ತಿಯ ಸುತ್ತಮುತ್ತಲಿನ ಹೊಲಗಳು ಮತ್ತು ತೋಟಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಂಡು ಜಾಗೃತಿಯನ್ನು ಮೂಡಿಸಲಾಯಿತು.
19
ಮಂಗಳೂರು ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರೊಂದಿಗೆ ನಗರದ ವಿವಿಧ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗಿ ಹೋಟೆಲ್ ಒಂದರಿಂದ ಕಿಶೋರ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಿಪಡಿಸಿ ಪುನರವಸ್ಥೆಗೊಳಿಸಲಾಯಿತು.
5
ಮಂಗಳೂರು ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರೊಂದಿಗೆ ನಗರದ ವಿವಿಧ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗಿ ಹೋಟೆಲ್ ಒಂದರಿಂದ ಕಿಶೋರ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಿಪಡಿಸಿ ಪುನರವಸ್ಥೆಗೊಳಿಸಲಾಯಿತು.
18
ಬಳ್ಳಾರಿ ಜಿಲ್ಲೆಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬಾಲ್ಯ ಸುರಕ್ಷತಾ ಅಭಿಯಾನ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೇಣಿ ವೀರಾಪುರ ಶಾಲೆಯಲ್ಲಿ ಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
15
ಚಾಮರಾಜನಗರ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಚಿಲ್ಡ್ರನ್ ಫೌಂಡೇಶನ್ ಆಫ್ ಇಂಡಿಯಾ ರವರ ಸಹಯೋಗದಲ್ಲಿ ಕೊಳ್ಳೇಗಾಲದಲ್ಲಿ ಬಾಲ್ಯ ವಿವಾಹ ಬಾಲಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ನಡೆದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಲಾಯಿತು.
13
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಹಠಾತ್‌ ದಾಳಿ/ತಪಾಸಣೆಯಲ್ಲಿ ರಕ್ಷಣೆ ಮಾಡಲಾದ ಬಾಲ/ಕಿಶೋರ ಕಾರ್ಮಿಕನಿಗೆ ಇಂದು ಪರಿಶಿಷ್ಟ ಜಾತಿ ಉಪಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಗಿರಿಜನ ಉಪಯೋಜನೆ(ಟಿ.ಎಸ್.ಪಿ)ಯಡಿ ಶೈಕ್ಷಣಿಕ ಕೀಟ್‌, ಆಹಾರ ಧಾನ್ಯಗಳ ಕಿಟ್, ಸಮವಸ್ತ್ರ ಹಾಗೂ ಇನ್ನಿತರೆ ವಸ್ತುಗಳನ್ನು ನೀಡಲಾಯಿತು.
16
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ನಗರದ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ, ಹೋಟೆಲ್ಗಳಿಗೆ ಹಾಗೂ ಭೇಟಿ ನೀಡಿತಪಾಸಣೆ ಕೈಗೊಳ್ಳಲಾಯಿತು. ಮಕ್ಕಳ್ಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಮಾಲೀಕರಿಗೆ ಜಾಗೃತಿ ಮೂಡಿಸಿ ಕರಪತ್ರ ಹಂಚುವುದರ ಮೂಲಕ ಅರಿವು ಮೂಡಿಸಲಾಯಿತು.
1
22
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಬಾಲ/ ಕಿಶೋರ ಕಾರ್ಮಿಕರ ತಪಾಸಣೆ/ಹಠಾತ್ ದಾಳಿ ಹಮ್ಮಿಕೊಳ್ಳಲಾಯಿತು. ಕೃಷಿ ಕೆಲಸಕ್ಕಾಗಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಸರಕು ಸಾಗಾಣಿಕೆ ವಾಹನಗಳನ್ನು ತಡೆದು ತಪಾಸಣೆ ಕೈಗೊಂಡಾಗ ಒಂದು ವಾಹನದಲ್ಲಿ ಒಬ್ಬ ಮಗು ಕಂಡು ಬಂದಿದ್ದು, ಆ ಮಗುವನ್ನುಪಾಲಕರು ವಶಕ್ಕೆ ಒಪ್ಪಿಸಲಾಯಿತು.
19
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ/ ಕಿಶೋರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು ಪುನರ್ವಸತಿಗೊಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 07 ಮಕ್ಕಳಿಗೆ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಯೋಜನೆಯಡಿ ಆಹಾರ ಧಾನ್ಯ, ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ಹಾಗೂ ಇನ್ನಿತರೆ ವಸ್ತುಗಳನ್ನು ನೀಡಲಾಯಿತು.
21
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬಾಲ್ಯ ಸುರಕ್ಷತಾ ಅಭಿಯಾನ ಅಂಗವಾಗಿ ನಗರದ ಸತ್ಯಂ ಶಾಲೆಯಲ್ಲಿ ಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
21
ಜಿಲ್ಲಾಧಿಕಾರಿಗಳು ರಾಯಚೂರುರವರ ಆದೇಶದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಬಾ/ ಕಿಕಾರ ತಪಾಸಣೆ/ಹಠಾತ್ ದಾಳಿ ಹಮ್ಮಿಕೊಳ್ಳಲಾಯಿತು. ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಕೆಲಸಕ್ಕಾಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿತ್ತಿದ್ದ 03 ಸರಕು ಸಾಗಾಣಿಕೆ ವಾಹನಗಳನ್ನುತಡೆದು ಒಟ್ಟು 11 ಮಕ್ಕಳನ್ನು ರಕ್ಷಣೆ ಮಾಡಲಾಯಿತು.
17
ಜಿಲ್ಲಾಧಿಕಾರಿಗಳು ರಾಯಚೂರುರವರ ಆದೇಶದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಬಾ/ ಕಿಕಾರ ತಪಾಸಣೆ/ಹಠಾತ್ ದಾಳಿ ಹಮ್ಮಿಕೊಳ್ಳಲಾಯಿತು. ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಕೆಲಸಕ್ಕಾಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿತ್ತಿದ್ದ 03 ಸರಕು ಸಾಗಾಣಿಕೆ ವಾಹನಗಳನ್ನುತಡೆದು ಒಟ್ಟು 11 ಮಕ್ಕಳನ್ನು ರಕ್ಷಣೆ ಮಾಡಲಾಯಿತು.
37
ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಈರುಳ್ಳಿ ಕಟಾವು ಮಾಡುವ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಕುರಿತ ದೂರಿನ ಅನ್ವಯ ತತಂಡವು ಈರುಳ್ಳಿ ಹೊಲಗಳಿಗೆ ಭೇಟಿ ನೀಡಿ ಕಾರ್ಮಿಕರಿಗೆ ಮತ್ತು ಜಮೀನು ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು.
29
ಅಜ್ಜಂಪುರ ತಾಲ್ಲೂಕು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈರುಳ್ಳಿ ಕಟಾವು ಮಾಡುವ ಕೆಲಸದಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕರ ಬಳಕೆ ಕುರಿತು ಸಾರ್ವಜನಿಕರಿಂದ ಬಂದಂತಹ ದೂರಿನ ಅನ್ವಯ ತಾಲೂಕು ಮಟ್ಟದ ಕಾರ್ಯಪಡೆ ವಿವಿಧ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನು ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು.
22
ಪಾಣೆ ಮಂಗಳೂರು ಹೋಬಳಿ ಏರಿಯಾ ದಲ್ಲಿರುವ ಫ್ಯಾಕ್ಟ್ರಿ, ಅಂಗಡಿ ಸಂಸ್ಥೆ ಗಳನ್ನು ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು .ತಪಾಸಣೆ ಸಮಯದಲ್ಲಿ ಕಿಶೋರಾವಸ್ಥೆಯ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ CWC ಮುಂದೆ ಪುನರವಸತಿ ಗಾಗಿ ಹಾಜರುಪಡಿಸಲಾಯಿತು.
42
ಯಲ್ಲಾಪುರ ತಾಲೂಕಿನಲ್ಲಿ ವಿವಿಧ ಅಂಗಡಿ ವಾಣಿಜ್ಯ ಸಂಸ್ಥೆಗಳ ತಪಾಸಣೆ ನಡೆಸಿ ಬಾ/ಕಿಕಾರನ್ನು ಕೆಲಸಕ್ಕೆ ನೇಮಿಸಿ ಕೊಳ್ಳದಂತೆ ಕರಪತ್ರ ಗಳನ್ನು ನೀಡಿ ಜಾಗ್ರತಿ ಮೂಡಿಸಲಾಯಿತು.
34
ಬ್ಯಾಡಗಿ ತಾಲ್ಲೂಕಿನಲ್ಲಿ ನಗರದ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ, ಹೋಟೆಲ್ಗಳಿಗೆ ಹಾಗೂ ಭೇಟಿ ನೀಡಿತಪಾಸಣೆ ಕೈಗೊಳ್ಳಲಾಯಿತು. 18 ವರ್ಷದೊಳಗಿನ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳು ಕೆಲಸ ಮಾಡುತ್ತಿರುವುದು ಕಂಡು ಬಂದಿರುವುದಿಲ್ಲ. ಮಕ್ಕಳ್ಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಮಾಲೀಕರಿಗೆ ಜಾಗೃತಿ ಮೂಡಿಸಲಾಯಿತು.
45