ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯ ಈ ಶುಭ ಸಂದರ್ಭದಲ್ಲಿ, ಅವರ ಜ್ಞಾನ, ಆದರ್ಶ, ಸತ್ಯ ಮತ್ತು ಧರ್ಮದ ಮಾರ್ಗದರ್ಶನ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಲಿ. ಮಹರ್ಷಿ ವಾಲ್ಮೀಕಿಯವರು ರಚಿಸಿದ ಮಹಾಕಾವ್ಯ ರಾಮಾಯಣವು ಮಾನವೀಯ ಮೌಲ್ಯಗಳು, ಕರ್ತವ್ಯನಿಷ್ಠೆ ಮತ್ತು ಧರ್ಮದ ಮಹತ್ವವನ್ನು ಸಾರುತ್ತದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು
⚠️ ಮಂಜಾ ದಾರ ಬಳಸಿ ಗಾಳಿಪಟ ಹಾರಿಸುವುದು ಪ್ರಾಣಕ್ಕೆ ಅಪಾಯಕಾರಿ!
ಗಾಳಿಪಟ ಹಾರಿಸಲು ಬಳಸುವ ಮಂಜಾ ದಾರವು ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಮಕ್ಕಳು ಹಾಗೂ ಪಕ್ಷಿಗಳ ಜೀವಕ್ಕೆ ಅಪಾಯ ಉಂಟುಮಾಡಬಹುದು. ಈ ದಾರ ಕುತ್ತಿಗೆಗೆ ಸಿಲುಕಿದರೆ ಗಂಭೀರ ಗಾಯಗಳಾಗುವ ಅಥವಾ ಪ್ರಾಣಹಾನಿಯಾಗುವ ಸಾಧ್ಯತೆ ಇದೆ.
ಮಂಜಾ ದಾರ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಮಂಜಾ ದಾರವನ್ನು ಬಳಸಿ ಗಾಳಿಪಟ ಹಾರಿಸಬಾರದು. ನಿಯಮಗಳನ್ನು ಪಾಲಿಸಿ, ಇತರರ ಜೀವಕ್ಕೂ ಬೆಲೆ ಕೊಡಿ.
🙏 ನಿಮ್ಮ ಸಂಭ್ರಮ ಮತ್ತೊಬ್ಬರ ಜೀವಕ್ಕೆ ಅಪಾಯವಾಗದಿರಲಿ.
ಜವಾಬ್ದಾರಿಯುತವಾಗಿ ವರ್ತಿಸಿ — ಜೀವ ಉಳಿಸಿ
ಪೊಲೀಸ್ ಸ್ಮರಣಾ ದಿನ – ಅಕ್ಟೋಬರ್ 21 🇮🇳
ದೇಶದ ಜನರ ಸುರಕ್ಷತೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಾ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗ ಮಾಡಿದ ವೀರ ಪೊಲೀಸ್ ಹುತಾತ್ಮರಿಗೆ ನಮ್ಮ ಹೃದಯಪೂರ್ವಕ ನಮನಗಳು.
ಪೊಲೀಸ್ ಹುತಾತ್ಮರ ಧೈರ್ಯ, ತ್ಯಾಗ ಮತ್ತು ಸೇವೆ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿರಲಿ.
ವೀರ ಹುತಾತ್ಮರಿಗೆ ಶತಶತ ನಮನಗಳು.
ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! 🌺🙏
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದುಷ್ಟಶಕ್ತಿಯ ವಿರುದ್ಧ ಶಿಷ್ಟಶಕ್ತಿಯ ವಿಜಯವನ್ನು ಸಾರುವ ಈ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ. ಎಲ್ಲರಿಗೂ ಶುಭವಾಗಲಿ, ಸರ್ವರಿಗೂ ಒಳಿತಾಗಲಿ. 💐✨
ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಯ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು. ಅಪರಿಚಿತ ವ್ಯಕ್ತಿಗಳು ಯಾವುದೇ ವೇಷದಲ್ಲಿ ಬಂದರೂ ಅವರ ವರ್ತನೆಯ ಬಗ್ಗೆ ಗಮನವಿರಲಿ. ಮಕ್ಕಳನ್ನು ಅಪರಿಚಿತರೊಂದಿಗೆ ಒಂಟಿಯಾಗಿ ಬಿಡಬೇಡಿ ಹಾಗೂ ಅಪರಿಚಿತರು ನೀಡುವ ಆಹಾರ, ಉಡುಗೊರೆ ಅಥವಾ ಆಮಿಷಗಳಿಗೆ ಮರುಳಾಗದಂತೆ ಮಕ್ಕಳಿಗೆ ತಿಳಿಸಿ. ಮಹಿಳೆಯರು ಅಪರಿಚಿತರಿಂದ ಅನುಚಿತ ವರ್ತನೆ ಎದುರಾದಲ್ಲಿ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಸಹಾಯ ಪಡೆಯಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ತುರ್ತು ಪರಿಸ್ಥಿತಿಯಲ್ಲಿ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ.
ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ – ಸಾರ್ವಜನಿಕರ ಸಹಕಾರ ನಮ್ಮ ಶಕ್ತಿ.
ಇತ್ತೀಚಿನ ದಿನಗಳಲ್ಲಿ ಕಳ್ಳರು ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು, ಮದುವೆಯ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಮನೆಯ ಬಾಗಿಲು ತೆರೆಯಿಸಿ ಒಳನುಗ್ಗಿ ಕಳ್ಳತನ ಮಾಡುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಅಪರಿಚಿತರು ಮನೆಗೆ ಬಂದಾಗ ಅವರ ಗುರುತು ಮತ್ತು ಉದ್ದೇಶವನ್ನು ಖಚಿತಪಡಿಸಿಕೊಳ್ಳಿ. ಮನೆಯ ಬಾಗಿಲನ್ನು ತಕ್ಷಣ ತೆರೆಯದೆ ಜಾಗರೂಕರಾಗಿರಿ. ಮನೆಯ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ.
ನಿಮ್ಮ ಎಚ್ಚರಿಕೆಯೇ ನಿಮ್ಮ ಮನೆಯ ಸುರಕ್ಷತೆ. ಜಾಗೃತರಾಗಿರಿ, ಸುರಕ್ಷಿತವಾಗಿರಿ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ, IPS ರವರು ಇಂದು CAIL – Christ Academy Institute of Law ಕಾಲೇಜಿನಲ್ಲಿ ಆಯೋಜಿಸಿದ್ದ “Drug Addiction and Prevention” ಕಾರ್ಯಕ್ರಮದಲ್ಲಿ ಭಾಗವಹಿಸಿ, .“ಬೇಡ Bro” ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು ಹಾಗೂ ಅವುಗಳಿಂದ ದೂರವಿರುವಂತೆ ಕುರಿತು ಜಾಗೃತಿ ಮೂಡಿಸಿದರು.
ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಕಂಡುಬಂದಲ್ಲಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
“ಬೇಡ Bro – ಮಾದಕ ವಸ್ತುಗಳಿಗೆ ಹೇಳಿ NO!” 🚫
ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯಕರ ಜೀವನವನ್ನು ಆಯ್ಕೆಮಾಡಿ.
ಮಾದಕ ವಸ್ತುಗಳ ಬಗ್ಗೆ ಮಾಹಿತಿ ಇದ್ದರೆ 112ಕ್ಕೆ ತಿಳಿಸಿ.
ಇಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಫುಟ್ ಪೆಟ್ರೋಲಿಂಗ್ ನಡೆಸಲಾಯಿತು.
ಪ್ರಮುಖ ರಸ್ತೆ, ಜನನಿಬಿಡ ಪ್ರದೇಶಗಳು, ವಾಣಿಜ್ಯ ಪ್ರದೇಶಗಳು ಹಾಗೂ ಸಾರ್ವಜನಿಕರು ಹೆಚ್ಚಾಗಿ ಸಂಚರಿಸುವ ಸ್ಥಳಗಳಲ್ಲಿ ಪೆಟ್ರೋಲಿಂಗ್ ನಡೆಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯ ಕುರಿತು ನಿಗಾ ವಹಿಸಲಾಯಿತು.
ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿಸುವುದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಫುಟ್ ಪೆಟ್ರೋಲಿಂಗ್ ಕೈಗೊಳ್ಳಲಾಯಿತು.
ದಿನಾಂಕ 05-10-2026 ರಂದು PF ಹಿಂಪಡೆಯುವಿಕೆಗೆ ಸಂಬಂಧಿಸಿದ ಇತ್ತೀಚಿನ ಅಧಿಸೂಚನೆಗಳಿಂದ ಕಾರ್ಮಿಕರ ಹಿತಾಸಕ್ತಿಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು, ಪಿ.ಎಫ್. ಕಮಿಟಿ, ದೆಹಲಿ ವತಿಯಿಂದ Joint Secretary, Ministry of Labour & Employment, Government of India, ಶ್ರೀಮತಿ ತೇಜಸ್ವಿನಿ ನಾಯಕ್, IAS ರವರು ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಹಾಗೂ ವಿಧಾನಸಭಾ ಸದಸ್ಯರಾದ ಶ್ರೀ ಸತೀಶ್ ರೆಡ್ಡಿ ರವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕಾರ್ಮಿಕರ ಹಿತಾಸಕ್ತಿ ಹಾಗೂ PF ಹಿಂಪಡೆಯುವಿಕೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಎಂ., IPS, ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗ ರವರು ಸಹ ಉಪಸ್ಥಿತರಿರುತ್ತಾರೆ.








