ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯು ಅಪಘಾತ ಪರಿಹಾರ ಸಹಾಯಧನವನ್ನು ನೀಡುತ್ತದೆ. ಫಲಾನುಭವಿ ಅಪಘಾತಕ್ಕೀಡಾದ ದಿನದಿಂದ ಒಂದು ವರ್ಷದ ಒಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
#ಶ್ರಮೇವ_ಜಯತೇ
#KBOCWWB #ಕಾರ್ಮಿಕ_ಇಲಾಖೆ
ಎಲ್ಲಾದರು ಇರು, ಎಂತಾದರು ಇರು
ಎಂದೆಂದಿಗೂ ನೀ, ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#kannadarajyotsava
ಪೇಂಟಿಂಗ್ ಮಾಡುವಾಗ ಸುರಕ್ಷತಾ ಬೆಲ್ಟ್ಗಳನ್ನು ತಪ್ಪದೇ ಧರಿಸಬೇಕು. ವಿದ್ಯುತ್ ಬೋರ್ಡ್, ಸ್ವಿಚ್ಗಳ ಬಳಿ ಪೇಂಟಿಂಗ್ ಮಾಡುವಾಗ ಜಾಗರೂಕರಾಗಿರಬೇಕು. ಪೇಂಟ್ ದೇಹದ ಮೇಲೆ ಬೀಳದಂತೆಯೂ ನೋಡಿಕೊಳ್ಳಿ.
#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ
#KBOCWWB
ಪರೀಕ್ಷೆಯ ಒತ್ತಡ, ಕೌಟುಂಬಿಕ ಸಮಸ್ಯೆ, ಮಾದಕ ವಸ್ತುಗಳ ವ್ಯಸನದಂತಹ ಸಮಸ್ಯೆಗಳಿಗೆ ಒಳಗಾಗಿದ್ದಲ್ಲಿ ಟೆಲಿ ಮನಸ್ ಸಹಾಯವಾಣಿ 14416 ಅಥವಾ 1800-89-14416 ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.
#ಶ್ರಮೇವ_ಜಯತೇ
#KBOCWWB
#ಕಾರ್ಮಿಕ_ಇಲಾಖೆ
ಮಂಡಳಿಯು ನೀಡುವ ಯಾವುದೇ ಸೌಲಭ್ಯಗಳಿಗೆ ಶುಲ್ಕ ಪಾವತಿ ಮಾಡಬೇಕಿಲ್ಲ. ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗದಂತೆ ಎಚ್ಚರಿಸಿ.
#ಶ್ರಮೇವ_ಜಯತೇ
#KBOCWWB #ಕಾರ್ಮಿಕ_ಇಲಾಖೆ
ಕಾರ್ಮಿಕರೇ, ವೆಲ್ಡಿಂಗ್ ಹಾಗೂ ಇತರ ಕಣ್ಣಿಗೆ ಅಪಾಯವನ್ನುಂಟು ಮಾಡುವ ಕೆಲಸದ ವೇಳೆ ಸೇಫ್ಟಿ ಕನ್ನಡಕ ಧರಿಸಿ. ಕಣ್ಣಿನ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಿ. ಅವಘಡ ಸಂಭವಿಸಿದ್ದಲ್ಲಿ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಿ.
#ಶ್ರಮೇವ_ಜಯತೇ #KBOWWB
#ಕಾರ್ಮಿಕ_ಇಲಾಖೆ
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳ ವೇಳೆ ಬರುವ ಧೂಳು ಕಾರ್ಮಿಕರ ಆರೋಗ್ಯಕ್ಕೆ ಹಾನಿಕಾರಕ. ಕೆಲಸದ ಸಮಯದಲ್ಲಿ ಮಾಸ್ಕ್ ಧರಿಸಿ ಧೂಳಿನಿಂದ ಉಂಟಾಗುವ ಅಲರ್ಜಿ, ಉಸಿರಾಟದ ತೊಂದರೆ ಹಾಗೂ ಅಸ್ತಮಾ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು.
#ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ
#KBOCWWB
ತೈಲ ಮತ್ತು ಅನಿಲ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸುರಕ್ಷತೆಯ ದೃಷ್ಟಿಯಿಂದ ನಿಯಮಿತವಾಗಿ ಗ್ಯಾಸ್ ಡಿಟೆಕ್ಟರ್ ಗಳನ್ನು ಬಳಸಿ. ಅಪಾಯದ ಸೂಚನೆ ಇದ್ದಲ್ಲಿ ಕಾರ್ಮಿಕರಿಗೆ ಮುಂಚಿತವಾಗಿ ಎಚ್ಚರಿಕೆಯನ್ನು ನೀಡುವಲ್ಲಿ ಗ್ಯಾಸ್ ಡಿಟೆಕ್ಟರ್ ಗಳು ಉಪಯುಕ್ತವಾಗಿವೆ.
#ಶ್ರಮೇವ_ಜಯತೇ
#KBOCWWB #ಕಾರ್ಮಿಕ_ಇಲಾಖೆ
ನಾಡಿನ ಸಮಸ್ತ ಜನತೆಗೆ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
#ValmikiJayanthi
ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೆಡ್ ಲ್ಯಾಂಪ್ ಧರಿಸುವುದು ಅತ್ಯಂತ ಮುಖ್ಯ. ಇದು ಅಪಘಾತಗಳನ್ನು ತಪ್ಪಿಸಲು ಹಾಗೂ ಕೆಲಸವನ್ನು ಸುರಕ್ಷಿತವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ
#KBOCWWB
ಉತ್ತರಪ್ರದೇಶ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ಅಗರ್ವಾಲ್, ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅನುಭವ್ ವರ್ಮಾ, ಇಂಡಸ್ ಅಕ್ಷನ್ನ ಸಲಹೆಗಾರರಾದ ಶ್ರೀ ಧ್ರುವ್ ಪ್ರಕಾಶ್ ಶುಕ್ಲಾ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಓಬದೇನಹಳ್ಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನಿರ್ಮಿಸಲಾಗಿರುವ ಶ್ರಮಿಕ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ, ನೋಂದಾಯಿತ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಸೇವೆ ನೀಡುವ ಸಂಚಾರಿ ಆರೋಗ್ಯ ಘಟಕದ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು ಉಪಸ್ಥಿತರಿದ್ದರು.
#ಶ್ರಮೇವ_ಜಯತೇ #KBOWWB
#ಕಾರ್ಮಿಕ_ಇಲಾಖೆ
ಮೈಸೂರಿನಲ್ಲಿ ನಡೆದ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಕಾರ್ಮಿಕ ಇಲಾಖೆಯ ಸ್ತಬ್ಧಚಿತ್ರ ಗಮನ ಸೆಳೆಯಿತು. ಕಾರ್ಮಿಕ ಇಲಾಖೆ ಹಾಗೂ ಮಂಡಳಿಯ ಯೋಜನೆಗಳು, ಸೌಲಭ್ಯಗಳ ಕುರಿತು ಈ ಸ್ತಬ್ಧಚಿತ್ರದಲ್ಲಿ ವಿವರಿಸಲಾಗಿತ್ತು.
#ಶ್ರಮೇವ_ಜಯತೇ #KBOWWB
#ಕಾರ್ಮಿಕ_ಇಲಾಖೆ
ಜಮಖಂಡಿ ಮತಕ್ಷೇತ್ರದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಡಳಿಯ ವತಿಯಿಂದ ವಿವಿಧ ಕಿಟ್ಗಳನ್ನು ಮಾನ್ಯ ಶಾಸಕರಾದ ಶ್ರೀ ಜಗದೀಶ್ ಗುಡಗುಂಟಿ ಅವರು ವಿತರಿಸಿದರು.
ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅರವತ್ತು ವರ್ಷ ದಾಟಿದ ಕಾರ್ಮಿಕರಿಗೆ ಮಂಡಳಿಯಿಂದ ಪಿಂಚಣಿ ಸೌಲಭ್ಯ ನೀಡಲಾಗುತ್ತಿದ್ದು, ಕಾರ್ಮಿಕರು ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಮಂಡಳಿಯ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜೀವಿತ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು.
#ಶ್ರಮೇವ_ಜಯತೇ #KBOWWB
#ಕಾರ್ಮಿಕ_ಇಲಾಖೆ
ನಾಡಿನ ಸಮಸ್ತ ಜನತೆಗೆ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು.
ವಿಜಯ ದಶಮಿಯು ವಿಜಯದ ಸಂಕೇತ. ದುಷ್ಟ ಶಕ್ತಿಗಳ ವಿರುದ್ಧದ ಗೆಲುವಿನ ಸಂಕೇತ. ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಒಳಿತನ್ನು ಮಾಡಲಿ.
#vijayadashami
ನಾಡಿನ ಸಮಸ್ತ ಜನತೆಗೆ ಆಯುಧಪೂಜೆಯ ಹಾರ್ದಿಕ ಶುಭಾಶಯಗಳು
ತಾಯಿ ಚಾಮುಂಡೇಶ್ವರಿಯು ಎಲ್ಲಾ ಕಾರ್ಮಿಕರಿಗೂ ಆರೋಗ್ಯ, ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ.
#AyudhaPooja
ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಯದ ವೇಳೆ ಕೆಲಸದ ಜೊತೆಗೇ ಸುರಕ್ಷತೆಗೂ ಆದ್ಯತೆ ನೀಡುವುದು ಅವಶ್ಯ. ಏಕೆಂದರೆ ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಅಪಾಯ ಉಂಟಾಗಬಹುದು ಇಲ್ಲವೇ ದೇಹದ ಅಂಗಾಂಗಗಳಿಗೆ ಹಾನಿಯಾಗಬಹುದು. ಆದ್ದರಿಂದ ನಿರ್ದಿಷ್ಟ ಸುರಕ್ಷತಾ ಸಾಧನಗಳನ್ನು ಧರಿಸುವುದರ ಜೊತೆಗೆ ಎಚ್ಚರಿಕೆಯನ್ನೂ ವಹಿಸಬೇಕು.
#ಶ್ರಮೇವ_ಜಯತೇ #KBOCWWB
#ಕಾರ್ಮಿಕ_ಇಲಾಖೆ
ಕಾರ್ಮಿಕರೇ, ಕೆಲಸದ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಗಮನವಿರಲಿ. ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದ ವೇಳೆ ಉತ್ತಮ ಗುಣಮಟ್ಟದ ಬೂಟ್ ಗಳನ್ನು ತಪ್ಪದೇ ಧರಿಸಿ.
#ಶ್ರಮೇವ_ಜಯತೇ
#KBOCWWB #ಕಾರ್ಮಿಕ_ಇಲಾಖೆ
ಕೆಲಸದ ಸ್ಥಳಗಳು ಮಕ್ಕಳಿಗೆ ಅಪಾಯಕಾರಿ. ಇಂತಹ ಕಡೆಗಳಲ್ಲಿ ಮಕ್ಕಳನ್ನು ಆಟವಾಡಲು ಬಿಡಬೇಡಿ. ಕಾರ್ಮಿಕರು ಕೆಲಸದಲ್ಲಿ ತೊಡಗಿರುವಾಗ ಮಕ್ಕಳು ಮರಳು, ಜಲ್ಲಿ, ಸಿಮೆಂಟ್ನಲ್ಲಿ ಆಟವಾಡುವುದರಿಂದ ಅವರ ಕಣ್ಣು, ಚರ್ಮಕ್ಕೆ ಅಪಾಯವುಂಟಾಗುತ್ತದೆ. ಆದ್ದರಿಂದ ಆದಷ್ಟು ಮಕ್ಕಳನ್ನು ಮನೆಗಳಲ್ಲೇ ಬಿಟ್ಟು ಬನ್ನಿ.
#ಶ್ರಮೇವ_ಜಯತೇ #KBOWWB
#ಕಾರ್ಮಿಕ_ಇಲಾಖೆ






















