
Official Twitter account of Halasuru Police Station (080-22942540) | Dial Namma -112 in case of emergency. | Help us to serve you better | @BlrCityPolice
India
Joined November 2015
- Tweets8.4K
- Following227
- Followers797
- Likes2.7K
ಹಲಸೂರು ಪೊಲೀಸ್ ಠಾಣೆ Halasuru Police Station retweeted
ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸೋಣ. ಪಟಾಕಿ ಮಾರಾಟಗಾರರು ಮತ್ತು ಸಾರ್ವಜನಿಕರು ಕಡ್ಡಾಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲಿ. ಎಲ್ಲರಿಗೂ ಸುರಕ್ಷಿತ ಹಾಗೂ ಸಂತೋಷದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
#HappyDeepavali @DgpKarnataka
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು 📱 #CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸರಳ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಸಂಬಂಧಿತ ಮಾಲೀಕರಿಗೆ ಹಿಂದಿರುಗಿಸಲಾಗಿರುತ್ತದೆ.
@DgpKarnataka #MobileRecovery #PublicAwareness #StayAlert
@CPBlr
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಈ ದಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತನಿಖಾ ಕೌಶಲ್ಯ ವೃದ್ಧಿ ಹಾಗೂ ಆಧುನಿಕ ತನಿಖಾ ವಿಧಾನಗಳ ಅಳವಡಿಕೆಗೆ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು. SOCO, ಸೈಬರ್, ಸಾಮಾಜಿಕ ಮಾಧ್ಯಮ, NDPS ಹಾಗೂ ವರದಕ್ಷಿಣೆ ಪ್ರಕರಣಗಳ ತನಿಖೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು.
@BlrCityPolice
@DgpKarnataka
@AddlCPEast
@CPBlr
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೊಲೀಸ್ ಹುತಾತ್ಮರ ದಿನದಂದು, ಕರ್ತವ್ಯದ ಹಾದಿಯಲ್ಲಿ ಪ್ರಾಣತ್ಯಾಗ ಮಾಡಿದ ವೀರ ಪೊಲೀಸ್ ಸಿಬ್ಬಂದಿಗೆ ಗೌರವಪೂರ್ವಕ ನಮನಗಳು. ಅವರ ಧೈರ್ಯ, ತ್ಯಾಗ ಮತ್ತು ಸೇವೆ ಸದಾ ಸ್ಮರಣೀಯ. ವೀರರ ತ್ಯಾಗ ಎಂದೆಂದಿಗೂ ನಮ್ಮ ಸ್ಫೂರ್ತಿ. 🙏
ಹಲಸೂರು ಪೊಲೀಸ್ ಠಾಣೆ Halasuru Police Station retweeted
ರೌಡಿಶೀಟರ್‌ಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಸಂಘಟಿತ ಅಪರಾಧ ದಳದ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಹತ್ತಾರು ವರ್ಷಗಳಿಂದ ಪೊಲೀಸರಿಗೆ ಸಿಗದೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಹೆಡೆಮುರಿ ಕಟ್ಟುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗಿದೆ.
The CCB Organised Crime Wing’s special operation to curb the illegal activities of rowdy-sheeters continues.
As part of the operation, two rowdy-sheeters who had been absconding for years, evading the police and failing to appear before the court, were finally apprehended, bringing them to justice and ensuring justice for the victims.
@CPBlr @seemantsingh96 @DgpKarnataka @KarnatakaCops
ಹಲಸೂರು ಪೊಲೀಸ್ ಠಾಣೆ Halasuru Police Station retweeted
112 ಕರೆ. ತಕ್ಷಣದ ಸ್ಪಂದನೆ. ಸಕಾಲಿಕ ಕ್ರಮದಿಂದ ಅಮೂಲ್ಯ ಜೀವ ರಕ್ಷಣೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಹಳ್ಳಿಯಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕುರಿತು ಮಾಹಿತಿ ಲಭ್ಯವಾದೊಡನೆ, ಹೊಯ್ಸಳ 122 ವಾಹನದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತಲುಪಿದ್ದಾರೆ.
ಬಾಧಿತ ಮಹಿಳೆಯನ್ನು ತಡಮಾಡದೆ ಮಾಗಡಿ ರಸ್ತೆಯ ಜೆ.ಎಂ. ಆಸ್ಪತ್ರೆಗೆ ಸೇರಿಸಿ, ಅಗತ್ಯ ತುರ್ತು ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಕ್ರಮ ವಹಿಸಲಾಗಿದೆ.
ಅಪಾಯದ ಸಮಯದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯ. ತುರ್ತು ನೆರವಿಗೆ 112 ಕರೆ ಮಾಡಿ.
A call to 112. A swift response. A life saved through timely intervention.
In Kithanhalli, within Madanayakanahalli Police Station limits, Hoysala 122 responded promptly after a woman was reported to have attempted suicide by consuming poison.
The police personnel rushed her to J M Hospital, Magadi Road, ensuring she received timely medical attention.
When every second matters, dial 112.
#BengaluruCityPolice #WeServeWeProtect
@CPBlr @seemantsingh96 @DgpKarnataka @KarnatakaCops
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಮನೆಯಲ್ಲಿ ಕುಳಿತು ಉದ್ಯೋಗ – ಸೈಬರ್ ವಂಚನೆ ಬಗ್ಗೆ ಎಚ್ಚರ!
ಹೆಚ್ಚಿನ ವೇತನದ ಆಮಿಷವೊಡ್ಡಿ ನಕಲಿ ಉದ್ಯೋಗದ ಹೆಸರಿನಲ್ಲಿ ಹಣ ಕೇಳಬಹುದು. ❌ ಉದ್ಯೋಗಕ್ಕಾಗಿ ಹಣ ಪಾವತಿಸಬೇಡಿ. OTP/ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ. ಅಧಿಕೃತ ಮೂಲಗಳನ್ನು ಪರಿಶೀಲಿಸಿ.
ವಂಚನೆಗೊಳಗಾದರೆ 1930ಕ್ಕೆ ಕರೆ ಮಾಡಿ.
ತುರ್ತು ಸಂದರ್ಭದಲ್ಲಿ 112.
#CyberSafety
🤖 Made with AI
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸಿ, ಪೊಲೀಸ್ ಗಸ್ತು ಹಾಗೂ ಗೋಚರತೆಯನ್ನು ಹೆಚ್ಚಿಸಲಾಯಿತು. ಅಚ್ಚರಿ ತಪಾಸಣೆಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿ, ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆ ಹಾಗೂ ಪೊಲೀಸರ ಮೇಲಿನ ವಿಶ್ವಾಸ ಹೆಚ್ಚಿಸುವುದು ನಮ್ಮ ಆದ್ಯತೆ.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಈ ದಿನ ಮಾನ್ಯ ಉಪಪೊಲೀಸ್ ಆಯುಕ್ತರು ಪೂರ್ವ ವಿಭಾಗರವರು ಪುಲಕೇಶಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯವೈಖರಿ ಪರಿಶೀಲಿಸಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ಹಾಗೂ ಸ್ನೇಹಪೂರ್ವಕವಾಗಿ ವರ್ತಿಸುವಂತೆ ಜನಸ್ನೇಹಿ ಪೊಲೀಸ್ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು @CPBlr @DcpEastBcp @acppnagar
ಹಲಸೂರು ಪೊಲೀಸ್ ಠಾಣೆ Halasuru Police Station retweeted
🚨 UPI/QR ಕೋಡ್ ವಂಚನೆ ಬಗ್ಗೆ ಎಚ್ಚರ!
QR ಕೋಡ್ ಸ್ಕ್ಯಾನ್ ಮಾಡುವ ಮೊದಲು ಎಚ್ಚರಿಕೆ ವಹಿಸಿ. ಹಣ ಸ್ವೀಕರಿಸಲು UPI PIN ನಮೂದಿಸುವ ಅಗತ್ಯವಿಲ್ಲ. ಅಪರಿಚಿತ ವ್ಯಕ್ತಿಗಳ QR ಕೋಡ್ ಅಥವಾ UPI ಲಿಂಕ್‌ಗಳನ್ನು ಬಳಸಬೇಡಿ. ❌
🔐 UPI PIN, OTP ಹಾಗೂ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
🚨 ವಂಚನೆಗೊಳಗಾದರೆ ತಕ್ಷಣ #Dial1930
🤖 Made with AI
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಇಂದು ಶಿವಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯನಿರ್ವಹಣೆ, ಕಾನೂನು-ಸುವ್ಯವಸ್ಥೆ,ತನಿಖಾ ಪ್ರಗತಿ ಹಾಗೂ ದಾಖಲೆಗಳ ನಿರ್ವಹಣೆ ಪರಿಶೀಲಿಸಿದೆ.
ಅಧಿಕಾರಿಗಳು & ಸಿಬ್ಬಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯಯುತ ಹಾಗೂ ಮಾನವೀಯವಾಗಿ ವರ್ತಿಸಿ, ಸಾರ್ವಜನಿಕ ಸ್ನೇಹಿ ಪೊಲೀಸ್ ಸೇವೆ ಹಾಗೂ ತ್ವರಿತ ಸ್ಪಂದನೆಗೆ ಆದ್ಯತೆ ನೀಡುವಂತೆ ಸೂಚಿಸಿದೆ.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಈ ದಿನ ಮಾನ್ಯ ಉಪಪೊಲೀಸ್ ಆಯುಕ್ತರು ಪೂರ್ವ ವಿಭಾಗರವರು ಶಿವಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯವೈಖರಿ ಹಾಗೂ ಸಿಬ್ಬಂದಿಯ ಕರ್ತವ್ಯಗಳನ್ನು ಪರಿಶೀಲಿಸಿದರು. ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ಹಾಗೂ ಸ್ನೇಹಪೂರ್ವಕವಾಗಿ ವರ್ತಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. @acppnagar @DcpEastBcp @CPBlr @AddlCPEast
ಹಲಸೂರು ಪೊಲೀಸ್ ಠಾಣೆ Halasuru Police Station retweeted
🚫 ಒಂದು ತಪ್ಪು ಹೆಜ್ಜೆ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು. ಮಾದಕ ವಸ್ತುಗಳ ಸೇವನೆ ಆರೋಗ್ಯ, ಕುಟುಂಬ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು, #ಬೇಡಬ್ರೋ ಎಂದು ದೃಢವಾಗಿ ಹೇಳಿ. ಜಾಗೃತರಾಗೋಣ, ವ್ಯಸನಮುಕ್ತ ಸಮಾಜ ನಿರ್ಮಿಸೋಣ. 🚔
#SayNoToDrugs #BedaBro #RISE
ಹಲಸೂರು ಪೊಲೀಸ್ ಠಾಣೆ Halasuru Police Station retweeted
🚨 ಡಿಜಿಟಲ್ ಅರೆಸ್ಟ್ ವಂಚನೆಗೆ ಎಚ್ಚರ!
ಪೊಲೀಸ್, CBI, ED ಅಥವಾ ಇತರೆ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ, “ಡಿಜಿಟಲ್ ಅರೆಸ್ಟ್” ಎಂದು ಬೆದರಿಸಿ ಹಣ ಕೇಳುವುದು ವಂಚನೆಯ ವಿಧಾನವಾಗಿದೆ.
❌ ಭಯಪಡಬೇಡಿ, ಹಣ ಪಾವತಿಸಬೇಡಿ.
❌ OTP/ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ.
✅ ಕರೆ ಕಡಿತಗೊಳಿಸಿ 1930ಕ್ಕೆ ಕರೆ ಮಾಡಿ.
#DigitalArrest
🤖 Made with AI
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಸರಳತೆ, ಪ್ರಾಮಾಣಿಕತೆ ಮತ್ತು ದೇಶಸೇವೆಯ ಪ್ರತೀಕವಾದ ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳು ಸದಾ ನಮಗೆ ಸ್ಫೂರ್ತಿಯಾಗಲಿ.
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. 🇮🇳
#LalBahadurShastriJayanti #JaiJawanJaiKisan
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಇಂದಿರಾನಗರ ಠಾಣೆ ವ್ಯಾಪ್ತಿಯ ಗ್ಯಾಸ್ ಸಿಲಿಂಡರ್ ಕಳವು ಪ್ರಕರಣ ಭೇದಿಸಿ, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 65 ಖಾಲಿ ಸಿಲಿಂಡರ್‌ಗಳು, 01 ಟೆಂಪೋ ಹಾಗೂ ₹2.49 ಲಕ್ಷ ನಗದು ವಶ. ಒಟ್ಟು ಮೌಲ್ಯ ₹4.14 ಲಕ್ಷ. ಬಂಧನದಿಂದ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ನಡೆದ ಒಟ್ಟು 07 ಸಿಲಿಂಡರ್ ಕಳವು ಪ್ರಕರಣಗಳು ಪತ್ತೆ.
@BlrCityPolice
ಹಲಸೂರು ಪೊಲೀಸ್ ಠಾಣೆ Halasuru Police Station retweeted
ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಲ್ಕೆರೆಯಲ್ಲಿ ಸುಮಾರು 70 ವರ್ಷದ ಹಿರಿಯ ಮಹಿಳೆಯೊಬ್ಬರು ಮನೆ ವಿಳಾಸ ತಿಳಿಯದೆ ಅಲೆದಾಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ, ಹೊಯ್ಸಳ-50 ಸಿಬ್ಬಂದಿ ಸ್ಥಳಕ್ಕೆ ತೆರಳಿ, ಅವರೊಂದಿಗೆ ಸಮಾಲೋಚನೆ ನಡೆಸಿ, ಸಂಬಂಧಿಕರನ್ನು ಪತ್ತೆಹಚ್ಚಿ, ಸುರಕ್ಷಿತವಾಗಿ ಅವರೊಂದಿಗೆ ಕಳುಹಿಸಿಕೊಡಲಾಯಿತು.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ತನಿಖಾ ಕೌಶಲ್ಯ ಮತ್ತು ಪರಿಣಾಮಕಾರಿತ್ವ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸಲಾಯಿತು.SOCO ಅಧಿಕಾರಿಗಳಿಂದ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಣೆ, ಸೈಬರ್ ಹಾಗೂ ಸಾಮಾಜಿಕ ಮಾಧ್ಯಮ ತನಿಖಾ ತಂತ್ರಗಳು, ವರದಕ್ಷಿಣೆ ನಿಷೇಧ ಕಾಯ್ದೆ , ವರದಕ್ಷಿಣೆ ಸಾವು ಪ್ರಕರಣಗಳ ತನಿಖಾ ವಿಧಾನಗಳ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಯಿತು.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಅಸುರಕ್ಷಿತ ಪರಿಸ್ಥಿತಿಯನ್ನು ನಿರ್ಲಕ್ಷಿಸಬೇಡಿ. ಯಾವುದೇ ಕಿರುಕುಳ, ಬೆದರಿಕೆ ಅಥವಾ ಅಪಾಯದ ಪರಿಸ್ಥಿತಿ ಎದುರಾದರೆ ತಕ್ಷಣ ಪೊಲೀಸರ ಸಹಾಯ ಪಡೆಯಿರಿ. ಸಮಯೋಚಿತ ಮಾಹಿತಿ ನಿಮ್ಮನ್ನು ಹಾಗೂ ಇತರರನ್ನು ಸುರಕ್ಷಿತವಾಗಿರಿಸಲು ಸಹಕಾರಿಯಾಗುತ್ತದೆ.
📞 ಮಹಿಳಾ ಸಹಾಯವಾಣಿ: 1091
🚨 ತುರ್ತು ಸಹಾಯವಾಣಿ: 112
#WomenSafety @BlrCityPolice
🤖 Made with AI
ಹಲಸೂರು ಪೊಲೀಸ್ ಠಾಣೆ Halasuru Police Station retweeted
ತನಿಖಾ ಕೌಶಲ್ಯ ವೃದ್ಧಿ ಹಾಗೂ ಆಧುನಿಕ ತನಿಖಾ ವಿಧಾನಗಳ ಅಳವಡಿಕೆಗೆ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು. SOCO, ಸೈಬರ್, ಸಾಮಾಜಿಕ ಮಾಧ್ಯಮ, NDPS ಹಾಗೂ ವರದಕ್ಷಿಣೆ ಪ್ರಕರಣಗಳ ತನಿಖೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಕೊನೆಯಲ್ಲಿ ಮೌಲ್ಯಮಾಪನ ಪರೀಕ್ಷೆ ನಡೆಸಿ, ಅತಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

















