ಒಂದು ತಪ್ಪು ಹೆಜ್ಜೆ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು. ಮಾದಕ ವಸ್ತುಗಳಿಂದ ದೂರವಿರಿ, ವ್ಯಸನಮುಕ್ತ ಸಮಾಜ ನಿರ್ಮಿಸೋಣ! #Haveripolice #SayNoToDrugs #Bedabro #DrugFreeSociety #AwarenessDrive
ತಪ್ಪು ಬದಿಯಲ್ಲಿ ಚಾಲನೆ ಮಾಡುವುದು ಅಪಘಾತಕ್ಕೆ ಬಹಿರಂಗ ಆಹ್ವಾನ. ಕೆಲವೇ ಕ್ಷಣಗಳನ್ನು ಉಳಿಸಲು ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಬೇಡಿ. ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ. #HaveriPolice #RoadSafety #DriveSafe #FollowTrafficRules #SafeDriving
ಹಾವೇರಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತಿನ ಗೌರವ ವಂದನೆಯನ್ನು ಸ್ವೀಕರಿಸಲಾಯಿತು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ ಜನ್ಮ ದಿನದ ಪ್ರಯುಕ್ತ "ರಾಷ್ಟ್ರೀಯ ಐಕ್ಯತಾ ದಿನ" ದ ಪ್ರತಿಜ್ಞಾ ವಿಧಿಯನ್ನು ಅಧಿಕಾರಿ/ಸಿಬ್ಬಂದಿಯವರಿಗೆ ಬೋಧಿಸಲಾಯಿತು. #Haveripolice #NationalUnityDay #Oathtaking
ಹಾನಗಲ್ ಶಹರದ ಆಕ್ಸ್‌ಫರ್ಡ್ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಹಾನಗಲ್ ಪೊಲೀಸ್ ಠಾಣೆ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. #Haveripolice #Legalawareness #Students























