
Official twitter account of Talaghatta Pura Police Station (080-22942359). Dial Namma-112 in case of emergency. @BlrCityPolice
Bengaluru, India
Joined November 2015
- Tweets826
- Following81
- Followers1.3K
- Likes397
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
ಬೆಂಗಳೂರು ನಗರದ ಆಡಳಿತಾತ್ಮಕ ಅನುಕೂಲತೆ ಹಾಗೂ ಪೊಲೀಸ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ನೂತನವಾಗಿ 'ಬೆಂಗಳೂರು ನಗರ ದಕ್ಷಿಣ ಪೊಲೀಸ್ ಆಯುಕ್ತಾಲಯ' (Commissioner of Police, South, Bengaluru City) ಸ್ಥಾಪಿಸಿ ಅಧಿಕೃತ ರಾಜ್ಯಪತ್ರ ಹೊರಡಿಸಿದೆ.
ಈ ನೂತನ ಆಯುಕ್ತಾಲಯದ ವ್ಯಾಪ್ತಿಗೆ ದಕ್ಷಿಣ ವಿಭಾಗವನ್ನು (South Division) ಸೇರ್ಪಡೆಗೊಳಿಸಲಾಗಿದೆ.
ದಕ್ಷಿಣ ವಿಭಾಗದ ವ್ಯಾಪ್ತಿಗೆ ಒಳಪಡುವ ಸಹಾಯಕ ಪೊಲೀಸ್ ಆಯುಕ್ತರ (ACP) ಕಚೇರಿಗಳು ಹಾಗೂ ಪೊಲೀಸ್ ಠಾಣೆಗಳ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಉತ್ತಮ ಪೊಲೀಸ್ ಸೇವೆಗೆ ನಮ್ಮ ಬದ್ಧತೆ.
#BengaluruPolice #DCPSouth #KarnatakaGovt #BengaluruCityPolice
#SouthCOP
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
Replying to @tgpuraps
@tgpuraps We are really thankful and proud of you Police force from Thalaghattapura station.🫡🫡
My old age mother’s gold chain snatched on 21st October and action of police was so intense and effective that culprits were behind bars in 24hrs, and our asset was handed over.
ಕೃತ್ಯ ನಡೆದ 36 ಗಂಟೆಗಳಲ್ಲಿ ಸರಗಳ್ಳತನ ಮಾಡಿದ್ದ ಆರೋಪಿಗಳ ಬಂಧನ ಮತ್ತು ಪ್ರಕರಣದಲ್ಲಿ ಅಮಾನತ್ತು ಪಡಿಸಿಕೊಂಡ ಸರವನ್ನು ವಾರಸುದಾರರಿಗೆ ವಾಪಸ್ಸು ಹಿಂದಿರಿಗಿಸಿರುತ್ತದೆ. @DCPSOUTHWESTBCP @BlrCityPolice – at Bengaluru South, India
ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಅಧಿಕೃತ ಮಾರಾಟ ಮಳಿಗೆಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಿ, ನಿಗದಿತ ಸಮಯವನ್ನು ಪಾಲಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಸಾರ್ವಜನಿಕರ ಸುರಕ್ಷತೆ ನಮ್ಮೆಲ್ಲರ ಹೊಣೆ. @DCPSOUTHWESTBCP – at Bengaluru South, India
Celebrate Diwali Responsibly. Use ONLY GREEN CRACKERS and strictly adhere to the permitted bursting hours of 8:00 PM to 10:00 PM. Any violation will invite strict legal action.
Stay safe, protect your community, and have a happy and responsible Diwali. @DCPSOUTHWESTBCP – at Bengaluru South, India
1
92
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
ಸುರಕ್ಷಿತ ಹಾಗೂ ಜವಾಬ್ದಾರಿಯುತವಾಗಿ ದೀಪಾವಳಿ ಆಚರಿಸೋಣ. ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ, ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಬೇಕು.
ಮಾಲಿನ್ಯಕಾರಕ ಪಟಾಕಿಗಳನ್ನು ತ್ಯಜಿಸಿ, ಮಕ್ಕಳು, ಹಿರಿಯರು ಹಾಗೂ ಸಾಕುಪ್ರಾಣಿಗಳ ಸುರಕ್ಷತೆಗೆ ಆದ್ಯತೆ ನೀಡೋಣ.
ಈ ದಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಟ್ ಪೆಟ್ರೋಲಿಂಗ್ ಮಾಡಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳು ವಾಹನಗಳ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳಲ ವಿವರವನ್ನು MCCTNS ಪೋರ್ಟಲ್ ಮೂಲಕ ಪರಿಶೀಲಿಸಲಾಯಿತು. @BlrCityPolice – at Anekal Bangaluru, India
🚸 ಸುರಕ್ಷಿತ ಬಾಲ್ಯ – ಸುರಕ್ಷಿತ ಭವಿಷ್ಯ 🚸
ತಲಘಟ್ಟಪುರ ಪೊಲೀಸ್ ಠಾಣೆ ವತಿಯಿಂದ ಈ ದಿನ # ಸಿದ್ದಗಂಗಾ ಪ್ರೌಢಶಾಲೆ ರಘುವನಹಳ್ಳಿಯಲ್ಲಿ “ಸುರಕ್ಷಿತ ಬಾಲ್ಯ” ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. @BlrCityPolice @DCPSOUTHWESTBCP
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚫 #BedaBro | #Sanmitra | #RISE
🤝 ಸನ್ಮಿತ್ರ – ವ್ಯಸನಮುಕ್ತ ಬದುಕಿನತ್ತ ಒಂದು ಹೆಜ್ಜೆ!
ಮಾದಕ ವ್ಯಸನವನ್ನು ನಿಯಂತ್ರಿಸಿ, ವ್ಯಸನದಿಂದ ತೊಂದರೆಗೊಳಗಾದವರನ್ನು ವ್ಯಸನಮುಕ್ತರನ್ನಾಗಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಎಂಬ ವಿಶೇಷ ಸಾಮಾಜಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
💚 ವ್ಯಸನಕ್ಕೆ “ಬೇಡ” ಎನ್ನಿ, ಆರೋಗ್ಯಕರ ಬದುಕಿಗೆ “ಹೌದು” ಎನ್ನಿ!
@BlrCityPolice @JointCPWest
#BedaBro #Sanmitra #RISE #SayNoToDrugs #BengaluruCityPolice #dcpsouthwest
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🔐 ವೈಯಕ್ತಿಕ ಮಾಹಿತಿ ಹಂಚಿಕೆಯಲ್ಲಿ ಎಚ್ಚರಿಕೆ ವಹಿಸಿ!
ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿವರಗಳು, ಫೋಟೋಗಳು, ವಿಳಾಸ ಹಾಗೂ ಬ್ಯಾಂಕ್ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳಬೇಡಿ. ಸೈಬರ್ ಅಪರಾಧಿಗಳು ನಿಮ್ಮ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ.
🔒 ಗೌಪ್ಯತಾ ಸೆಟ್ಟಿಂಗ್ಗಳನ್ನು ಸಕ್ರಿಯಗೊಳಿಸಿ. ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
🚨 ಸೈಬರ್ ಆರ್ಥಿಕ ವಂಚನೆಗೊಳಗಾದಲ್ಲಿ ತಕ್ಷಣ 1930ಕ್ಕೆ ಕರೆ ಮಾಡಿ ಅಥವಾ cybercrime.gov.in ಮೂಲಕ ದೂರು ದಾಖಲಿಸಿ.
ಎಚ್ಚರಿಕೆ ವಹಿಸಿ – ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ!
@BlrCityPolice @JointCPWest
#CyberAwareness #CyberSafety #StayAlert
🤖 Made with AI
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚔 ನೈಋತ್ಯ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತನಿಖಾ ಕೌಶಲ್ಯ ವೃದ್ಧಿ ತರಬೇತಿ ಕಾರ್ಯಾಗಾರ
ನೈರುತ್ಯ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ತನಿಖಾ ಕೌಶಲ್ಯ ಮತ್ತು ತನಿಖಾ ವಿಧಾನಗಳ ಕುರಿತು 3ನೇ ತರಬೇತಿ ಕಾರ್ಯಾಗಾರವನ್ನು ದಿನಾಂಕ 22.10.2026 ರಂದು ಪ್ರೊ. ವೆಂಕಟಗಿರಿಗೌಡ ಮೆಮೋರಿಯಲ್ ಹಾಲ್, ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾನ್ಯ 2ನೇ ಎ.ಸಿ.ಜೆ.ಎಂ ನ್ಯಾಯಾಲಯ ಬೆಂಗಳೂರು ಗ್ರಾಮಾಂತರದ ಹಿರಿಯ ಸರ್ಕಾರಿ ಅಭಿಯೋಜಕರಾದ ಶ್ರೀ ಮಧುಸೂದನ್ ಹೆಚ್ ಕೆ ರವರು ತನಿಖಾ ನ್ಯೂನತೆಗಳು ತನಿಖೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕಾನೂನು ಮಾರ್ಗಸೂಚಿಗಳು, ತನಿಖೆಯ ಗುಣಮಟ್ಟ ಹೆಚ್ಚಿಸುವ ಕ್ರಮಗಳ ಬಗ್ಗೆ ಮತ್ತು ಮಾನ್ಯ 1ನೇ ಎ.ಸಿ.ಜೆ.ಎಂ ನ್ಯಾಯಾಲಯ ಬೆಂಗಳೂರು ನಗರದ ಹಿರಿಯ ಸರ್ಕಾರಿ ಅಭಿಯೋಜಕರಾದ ಶ್ರೀ ಮುನಿರಾಜು ಎಂ ರವರು ಪ್ರಾಥಮಿಕ ತನಿಖೆ, ಶಂಕಿತರ ವಿಚಾರಣೆ, ತನಿಖೆಯ ಗುಣಮಟ್ಟ ಹೆಚ್ಚಿಸುವ ಕ್ರಮಗಳ ಬಗ್ಗೆ ಹಾಗೂ ಶ್ರೀ ಡಾ. ಪ್ರದೀಪ್ ನಿರ್ದೇಶಕರು ಹಾಗೂ ಮುಖ್ಯಸ್ಥರು ಹಾವೇರಿ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾವೇರಿ ಜಿಲ್ಲೆ ರವರು Medico Legal Examination, Case Studies of Sexual Assualt, Homicide, POCSO, Traffic fatal Case and Other UDR Cases ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ತನಿಖಾ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.
ವಿಶೇಷವಾಗಿ ಸಂತ್ರಸ್ತರ ಹೇಳಿಕೆಗಳನ್ನು ಕಾನೂನುಬದ್ಧವಾಗಿ ದಾಖಲಿಸುವುದು, ಅಗತ್ಯ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದು ಹಾಗೂ ವೈದ್ಯಕೀಯ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸೂಕ್ತವಾಗಿ ಪರಿಗಣಿಸುವುದು ಸೇರಿದಂತೆ ತನಿಖೆಯ ವಿವಿಧ ಹಂತಗಳ ಕುರಿತು ಮಾರ್ಗದರ್ಶನ ನೀಡಿದರು.
ಈ ಕಾರ್ಯಾಗಾರವು ನೈರುತ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯವರ ತನಿಖಾ ಕೌಶಲ್ಯ, ಕಾನೂನು ಜ್ಞಾನ ಮತ್ತು ವೃತ್ತಿಪರ ಜ್ಞಾನಭಿವೃದ್ದಿ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿ, ಪ್ರಕರಣಗಳ ಗುಣಮಟ್ಟದ ಹಾಗೂ ಪರಿಣಾಮಕಾರಿ ತನಿಖೆಗೆ ಸಹಕಾರಿಯಾಗಲಿದೆ. @BlrCityPolice @JointCPWest
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
@DCPSOUTHWESTBCP Div @konanakunteps ವ್ಯಾಪ್ತಿಯಲ್ಲಿಹಳೆಯ ದ್ವೇಷದ ಹಿನ್ನಲೆ ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಗನ್ನಿಂದ ಕಾಲಿಗೆ ಗುಂಡುಹಾರಿಸಿ ತೀವ್ರ ರಕ್ತ ಗಾಯ ಮಾಡಿ ಕೊಲೆಗೆಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. @BlrCityPolice
ಬೆಂಗಳೂರು ಸುತ್ತಮುತ್ತ ದೇವಸ್ಥಾನಗಳ ಬೀಗ ಮುರಿದು ದೇವರ ವಿಗ್ರಹಗಳು, ದೇವರ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಮತ್ತು ಮಾಲನ್ನು ಅಮಾನತ್ತುಪಡಿಸಿಕೊಂಡಿರುತ್ತದೆ. @DCPSOUTHWESTBCP @BlrCityPolice – at Bengaluru South, India
1
148
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚔 ರಾತ್ರಿ ಗಸ್ತು ಹಾಗೂ ನಾಕಾಬಂದಿ
ನಿನ್ನೆ ದಿನಾಂಕ:04.10.2026 ರಂದು ರಾತ್ರಿ ನೈಋತ್ಯ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಗಸ್ತಿನ ಅಧಿಕಾರಿ ಹಾಗೂ ಸಿಬ್ಬಂದಿಯವರು ನಾಕಾಬಂದಿ ಮೂಲಕ ವಾಹನಗಳ ತಪಾಸಣೆ ನಡೆಸಿ, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಶೋಧ ಮತ್ತು ಪರಿಶೀಲನೆಯನ್ನು ವ್ಯಾಪಕವಾಗಿ ಕೈಗೊಂಡರು. @BlrCityPolice
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚦 ರಸ್ತೆ ರೋಷಾವೇಶಕ್ಕೆ ಬ್ರೇಕ್ ಹಾಕೋಣ!
ನಗರದ ವಾಹನ ದಟ್ಟಣೆಯಲ್ಲಿ ಸಣ್ಣ ತಪ್ಪು, ತಪ್ಪು ಅರ್ಥೈಸಿಕೊಳ್ಳುವಿಕೆ ಅಥವಾ ಆತುರ ಕೋಪಕ್ಕೆ ಕಾರಣವಾಗಬಹುದು. ಆದರೆ ಒಂದು ಕ್ಷಮೆಯಾಚನೆಯ ಮಾತು, ಒಂದು ಕ್ಷಣದ ತಾಳ್ಮೆ ರಸ್ತೆ ರೋಷಾವೇಶವನ್ನು ತಡೆಯಲು ಸಹಾಯ ಮಾಡುತ್ತದೆ. @BlrCityPolice @JointCPWest
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
Replying to @tgpuraps
@tgpuraps ವ್ಯಾಪ್ತಿಯ ಸೂಕ್ಷ್ಮ ಪ್ರದೇಶವಾದ ಆವಲಹಳ್ಳಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಅಕ್ಸ ಮಸೀದಿ ಮುಂಭಾಗದಿಂದ ಸಾಗಿದ ಹಿನ್ನೆಲೆಯಲ್ಲಿ, @DCPSOUTHWESTBCP ರವರು ಖುದ್ದಾಗಿ ಬಂದೋಬಸ್ತ್ನಲ್ಲಿ ಭಾಗವಹಿಸಿ, @ablesbpura ರವರ ಉಪಸ್ಥಿತಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬಂದೋಬಸ್ತ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. 👮♂️🛡️ @BlrCityPolice @JointCPWest @tgpuraps @ablesbpura
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🚔 ತುರ್ತು ಸ್ಪಂದನೆ |
@konanakunteps ವ್ಯಾಪ್ತಿಯ ಜಂಬೂಸವಾರಿದಿಣ್ಣೆ ಸಮೀಪದ ರಾಯಲ್ ಲೇಕ್ ವ್ಯೂ ರೆಸಿಡೆನ್ಸಿ ಅಪಾರ್ಟ್ಮೆಂಟ್ನಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದ 29 ವರ್ಷದ ಚೇತನ್ ಅವರನ್ನು @tgpuraps ಹೊಯ್ಸಳ-158 ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದರು.
📞 112ಕ್ಕೆ ಬಂದ ತುರ್ತು ಕರೆಯನ್ನು ಸ್ವೀಕರಿಸಿದ ASI ಎಲ್. ಪ್ರಕಾಶ್ ಹಾಗೂ PC-22673 ಸಂಜೀವ್ ಕುಮಾರ್ ಎಂ.ಬಿ. ಅವರು ತಕ್ಷಣ ಸ್ಥಳಕ್ಕೆ ತೆರಳಿ, ಸ್ಥಳೀಯರ ಸಹಕಾರದೊಂದಿಗೆ ಲಿಫ್ಟ್ನಿಂದ ಚೇತನ್ ಅವರನ್ನು ಸುರಕ್ಷಿತವಾಗಿ ಹೊರತೆಗೆದರು.
⏱️ Dispatch: 10:56:35
📍 ಸ್ಥಳಕ್ಕೆ ಆಗಮನ: 11:02:49
ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ.
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. 👮♂️🤝
@BlrCityPolice @JointCPWest @ablesbpura
#EmergencyResponse #PoliceResponse
ಅಪಾರ್ಟ್ಮೆಂಟ್ ಲಿಫ್ಟ್ ನಲ್ಲಿ ಸಿಲುಕಿದ ಯುವಕನನ್ನು ಕೇವಲ ಐದು ನಿಮಿಷಗಳಲ್ಲಿ ರಕ್ಷಿಸಿದ ತಲಘಟ್ಟಪುರ ಪೊಲೀಸ್ ಠಾಣೆ ಹೊಯ್ಸಳ 158 ಅಧಿಕಾರಿ ಮತ್ತು ಸಿಬ್ಬಂದಿ. @BlrCityPolice @DCPSOUTHWESTBCP – at Bengaluru South, India
4
391
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
🌺 ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🙏
ವಿಘ್ನಹರ್ತನಾದ ಶ್ರೀ ಗಣೇಶನು ನಮ್ಮೆಲ್ಲಾ ವಿಘ್ನಗಳನ್ನು ನಿವಾರಿಸಿ, ಉಜ್ವಲ, ಸಂತೋಷಭರಿತ ಹಾಗೂ ಸಮೃದ್ಧ ಜೀವನವನ್ನು ಕರುಣಿಸಲಿ.
ಈ ಪವಿತ್ರ ಸಂದರ್ಭದಲ್ಲಿ ಭಕ್ತಿ, ಜವಾಬ್ದಾರಿ ಮತ್ತು ಸೌಹಾರ್ದತೆಯಿಂದ ಗಣೇಶ ಚತುರ್ಥಿಯನ್ನು ಆಚರಿಸೋಣ. ಶಾಂತಿಯುತ, ಸುರಕ್ಷಿತ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ. 🤝
ಶಾಂತಿ • ಸೌಹಾರ್ದತೆ • ಸುರಕ್ಷತೆ
@BlrCityPolice
@JointCPWest
@kumbalaguduPS
@kengeribcpksp
@tgpuraps
@konanakunteps
@sbpurabcp
@kslayout
#ಗಣೇಶಚತುರ್ಥಿ #DcpSouthwest
THALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ retweeted
Replying to @tgpuraps
@tgpuraps ಭೇಟಿ ನೀಡಿ ಠಾಣೆಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲಾಯಿತು. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೈಗೊಂಡಿರುವ ಬಂದೋಬಸ್ತ್ ವ್ಯವಸ್ಥೆಗಳ ಕುರಿತು ಠಾಣಾಧಿಕಾರಿಗಳಿಂದ ವಿವರ ಪಡೆದುಕೊಳ್ಳಲಾಯಿತು.
@tgpuraps ಠಾಣಾ ವ್ಯಾಪ್ತಿಯ ಆವಲಹಳ್ಳಿ ಅಕ್ಸ ಮಸೀದಿಗೆ ಭೇಟಿ ನೀಡಿ, ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಕಾಪಾಡುವಂತೆ ಕೋರಲಾಯಿತು. @BlrCityPolice @SbPura @tgpuraps @konanakunteps








































