
Official Twitter account of DCP KENGERI (South-West) Division, Bengaluru City. Dial 112 in case of emergency, Help us to serve you better @BlrCityPolice
Bengaluru City, Karnataka, IND
Joined July 2025
- Tweets370
- Following109
- Followers284
- Likes114
🙏 ಧನ್ಯವಾದಗಳು | ನೈಋತ್ಯ ವಿಭಾಗ 🙏
ನೈಋತ್ಯ ವಿಭಾಗದಿಂದ ವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಅಪರಾಧ ಪತ್ತೆ ಕಾರ್ಯಗಳಲ್ಲಿ ಸಹಕಾರ ಮತ್ತು ಬೆಂಬಲ ನೀಡಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಧನ್ಯವಾದಗಳು.
ನೀಡಿದ ನಿಮ್ಮೆಲ್ಲರ ಸಹಕಾರ, ಪ್ರೀತಿ ಮತ್ತು ವಿಶ್ವಾಸ ಸದಾ ಸ್ಮರಣೀಯ. @BlrCityPolice @JointCPWest
#SouthWestDivision #ThankYou #BengaluruCityPolice
ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ Group A ಮತ್ತು B ವೃಂದದ ಲಿಖಿತ ಪರೀಕ್ಷೆಯ ಹಿನ್ನೆಲೆಯಲ್ಲಿ, @DCPSOUTHWESTBCP division @kengeribcpksp , @JbharathiPS1 ಹಾಗೂ @sbpurabcp ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು. ಪರೀಕ್ಷೆಯು ಶಾಂತಿಯುತವಾಗಿ, ಸುರಕ್ಷಿತವಾಗಿ ಹಾಗೂ ಸುಸೂತ್ರವಾಗಿ ನಡೆಯುವಂತೆ ಅಗತ್ಯ ಪೊಲೀಸ್ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 👮♂️🇮🇳 @BlrCityPolice @blrcitytraffic @DgpKarnataka
🌈 ಮಕ್ಕಳ ಕನಸುಗಳೇ ನಾಳಿನ ಭವಿಷ್ಯದ ಭರವಸೆ! 🌈
ಮಕ್ಕಳ ನಗು, ಮುಗ್ಧತೆ ಮತ್ತು ಕನಸುಗಳೇ ಉತ್ತಮ ಸಮಾಜದ ಭದ್ರ ಬುನಾದಿ. ಪ್ರತಿಯೊಂದು ಮಗುವಿಗೂ ಸುರಕ್ಷಿತ ಬಾಲ್ಯ, ಗುಣಮಟ್ಟದ ಶಿಕ್ಷಣ ಹಾಗೂ ಉಜ್ವಲ ಭವಿಷ್ಯ ದೊರೆಯಲಿ.
ಮಕ್ಕಳ ಹಕ್ಕುಗಳನ್ನು ಗೌರವಿಸಿ, ಅವರ ಕನಸುಗಳಿಗೆ ರೆಕ್ಕೆಗಳಾಗೋಣ. ಮಕ್ಕಳ ಸುರಕ್ಷತೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸೋಣ.
ಮಹತ್ತರ ಕನಸುಗಳನ್ನು ಹೊತ್ತ ಪುಟ್ಟ ಹೃದಯಗಳಿಂದಲೇ ಪ್ರತಿಯೊಂದು ಶ್ರೇಷ್ಠ ಭವಿಷ್ಯವೂ ನಿರ್ಮಾಣವಾಗುತ್ತದೆ.
ನಾಡಿನ ಸಮಸ್ತ ಮಕ್ಕಳಿಗೂ ಬೆಂಗಳೂರು ನಗರ ಪೊಲೀಸ್, ನೈಋತ್ಯ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 💐 @BlrCityPolice @JointCPWest @JointCP_crime
#ChildrensDay #BengaluruCityPolice #SouthWestDivision #ChildSafety
ಮಾನ್ಯ ಭಾರತದ ಪ್ರಧಾನಮಂತ್ರಿಗಳ ಬೆಂಗಳೂರು ಭೇಟಿಯ ಹಿನ್ನೆಲೆಯಲ್ಲಿ, ನೈಋತ್ಯ ವಿಭಾಗದ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ರಾತ್ರಿ ಗಸ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮುಂಜಾಗ್ರತಾ ಕ್ರಮವಾಗಿ ಬಾರ್ ಮತ್ತು ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸಿದರು. ಜೊತೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೂ ನಿಗಾ ವಹಿಸಿ ತಪಾಸಣೆ ಕೈಗೊಳ್ಳಲಾಯಿತು.
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. @BlrCityPolice @JointCPWest @dgpcidkarnataka
#DCPsouthwest #BengaluruCityPolice #SouthWestDivision #NightPatrolling
DCP KENGERI (South-West) Bengaluru City retweeted
ದೀಪಗಳೊಂದಿಗೆ ದೀಪಾವಳಿಯ ಸಂಭ್ರಮ, ನಗು ಮತ್ತು ಒಗ್ಗಟ್ಟಿನ ಕ್ಷಣಗಳು!
ದಕ್ಷಿಣ ಪಶ್ಚಿಮ ವಿಭಾಗದ ಡಿಸಿಪಿ ಡಾ. ಎಸ್. ಕೆ. ಸೌಮ್ಯಲತಾ, ಐಪಿಎಸ್ ಅವರು ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಆರ್ (CAR) ಪ್ರಧಾನ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರೊಂದಿಗೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಸಾಂಪ್ರದಾಯಿಕ ದೀಪಗಳನ್ನು ಬೆಳಗಿಸುವುದರಿಂದ ಹಿಡಿದು ಮಕ್ಕಳೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವವರೆಗೆ, ಈ ಆಚರಣೆಯು ಕಳಕಳಿ, ಸಂತೋಷ ಮತ್ತು ಒಗ್ಗಟ್ಟಿನಿಂದ ಕಂಗೊಳಿಸಿತು.
ಒಂದೇ ಪೊಲೀಸ್ ಕುಟುಂಬ, ಅಸಂಖ್ಯಾತ ನಗುಗಳು ಮತ್ತು ಎಂದೆಂದೂ ನೆನಪಿನಲ್ಲಿ ಉಳಿಯುವಂತಹ ಆಚರಣೆ!
Lighting Up Diwali with Smiles and Togetherness!
Dr. S. K. Soumyalatha, IPS, DCP South West, along with other police officers, joined police personnel and their families at CAR Headquarters to celebrate the festival of lights.
From lighting traditional lamps to sharing festive joy with children, the celebration was filled with warmth, happiness and togetherness.
One police family, countless smiles and a celebration to remember!
#DiwaliCelebrations #PoliceFamily #BengaluruCityPolice
@CPBlr
@seemantsingh96
@DgpKarnataka
@KarnatakaCops
@Jointcptraffic
@CMofKarnataka
@PriyankKharge
ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ, @DCPSOUTHWESTBCP ರವರ ನೇತೃತ್ವದಲ್ಲಿ @DCPWestBCP ವ್ಯಾಪ್ತಿಯ @APNagarBCP ಪೊಲೀಸ ವಸತಿ ಗೃಹದಲ್ಲಿ ನೈರುತ್ಯ ವಿಭಾಗದ ACPs ಹಾಗೂ PIs ರವರುಗಳು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಿಹಿ ಹಂಚಿಕೊಂಡು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ದೀಪಾವಳಿಯು ಎಲ್ಲರ ಜೀವನದಲ್ಲೂ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷದ ಬೆಳಕನ್ನು ಹರಡಲಿ.
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔 @BlrCityPolice
@blrcitytraffic @JointCPWest
ಸುರಕ್ಷಿತ ದೀಪಾವಳಿ – ಸಂತಸದ ದೀಪಾವಳಿ!
#BengaluruCityPolice #DCPSouthWest #PoliceFamily #HappyDeepavali #SafeDeepavali 🪔✨❤️
ನೈಋತ್ಯ ವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳ ರಾತ್ರಿ ಗಸ್ತು ಅಧಿಕಾರಿಗಳು ಮತ್ತು ಸಿಬ್ಬಂದಿಯವರು ವಿವಿಧ ಸ್ಥಳಗಳಲ್ಲಿ ನಾಕಾಬಂದಿ ನಡೆಸಿ ವಾಹನಗಳ ತಪಾಸಣೆ ಕೈಗೊಂಡರು.
ಇದರೊಂದಿಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ತಪಾಸಣೆ ಹಾಗೂ ಪರಿಶೀಲನೆ ನಡೆಸಿ, ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು. @BlrCityPolice @JointCPWest @AcpKengeri
#DCPsouthwest #SouthWestDivision #NightPatrolling #NakaBandi
🤖 Made with AI
1
3
288
ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯವನ್ನು ತರಲಿ. ದೀಪಗಳ ಬೆಳಕು ಬದುಕಿನ ಕತ್ತಲೆಯನ್ನು ದೂರಮಾಡಿ, ಹೊಸ ಭರವಸೆ, ಸಂತೋಷ ಮತ್ತು ಯಶಸ್ಸಿನ ಹಾದಿಯನ್ನು ಬೆಳಗಿಸಲಿ.
ಪಟಾಕಿಗಳನ್ನು ಸಿಡಿಸುವಾಗ ಎಚ್ಚರಿಕೆ ವಹಿಸಿ, ನಿಗದಿತ ಸಮಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ. ಸಾರ್ವಜನಿಕರ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸೋಣ.
ಸುರಕ್ಷಿತ ದೀಪಾವಳಿ, ಸಂತಸದ ದೀಪಾವಳಿ! 🪔
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔✨ @BlrCityPolice @JointCPWest @AcpKengeri @ablesbpura
#HappyDiwali2026 #FestivalOfLights #SafeDiwali #CelebrateResponsibly #DCPSouthWest
6
267
ಪಟಾಕಿಗಳನ್ನು ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಹಸಿರು ಪಟಾಕಿಗಳನ್ನೇ ಬಳಸಿ ಹಾಗೂ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಸಮಯದ ಮಿತಿಯನ್ನು ಕಡ್ಡಾಯವಾಗಿ ಪಾಲಿಸಿ.
ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ದೀಪಾವಳಿ ಹಬ್ಬವನ್ನು ಆಚರಿಸೋಣ.@BlrCityPolice
#SafeDeepavali #GreenCrackers #CelebrateSafely #EcoFriendlyDeepavali
🚔 ಅಪರಾಧ ವಿಮರ್ಶನಾ ಸಭೆ
ದಿನಾಂಕ: 04.11.2026 ರಂದು @DCPSOUTHWESTBCP ರವರ ನೇತೃತ್ವದಲ್ಲಿ ನೈಋತ್ಯ ವಿಭಾಗದ ಎಲ್ಲಾ ACPs ಹಾಗೂ PIs ರವರೊಂದಿಗೆ ಅಪರಾಧ ವಿಮರ್ಶನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಅಪರಾಧ ಪ್ರಕರಣಗಳ ತನಿಖೆಯ ಪ್ರಗತಿ, CEIR ಪೋರ್ಟಲ್ ಮೂಲಕ ಕಳೆದುಹೋದ ಮೊಬೈಲ್‌ಗಳ ಪತ್ತೆ, Cri-MAC, NATGRID, e-Sakshya, e-Summons ಮತ್ತುSmart E Beat, ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆ ಹಾಗೂ ರಾತ್ರಿ ಗಸ್ತು ಹೆಚ್ಚಿಸುವ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.
@BlrCityPolice @JointCPWest @AcpKengeri
#DCPSouthwest #CrimeReviewMeeting #BengaluruCityPolice #SouthWestDivision
2
178
DCP KENGERI (South-West) Bengaluru City retweeted
ಇದನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುತ್ತೀರಾ, ನಿರ್ಲಕ್ಷಿಸುತ್ತೀರಾ ಅಥವಾ ವರದಿ ಮಾಡುತ್ತೀರಾ?
ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಮತ್ತು ನಿಮ್ಮ ಉತ್ತರವನ್ನು ಕಾಮೆಂಟ್‌ನಲ್ಲಿ ತಿಳಿಸಿ.
ನೆನಪಿಡಿ: ನಿಮ್ಮ ಒಟಿಪಿ (OTP) ನಿಮಗಾಗಿ ಮಾತ್ರ. ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
Would you share it, ignore it, or report it?
Choose wisely and tell us your answer in the comments.
Remember: Your OTP is meant for you. Never share it with anyone.
#BengaluruCityPolice #CyberSafety #OTPScam #StayAlert #BeCyberSafe #WeServeWeProtect
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
🪔 ಸೈಬರ್ ವಂಚನೆಗೆ ಅವಕಾಶ ನೀಡದೆ, ಸಂತೋಷದಿಂದ ದೀಪಾವಳಿ ಆಚರಿಸೋಣ!
ಹಬ್ಬದ ಸಂದರ್ಭದಲ್ಲಿ ಬರುವ ನಕಲಿ ಆಫರ್‌ಗಳು, ವಂಚನೆಯ ಶಾಪಿಂಗ್ ಲಿಂಕ್‌ಗಳು, OTP ವಂಚನೆ ಹಾಗೂ ಆನ್‌ಲೈನ್ ಹಣಕಾಸು ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಿ.
ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು ಯೋಚಿಸಿ, ಪರಿಶೀಲಿಸಿ. ಸೈಬರ್ ಸುರಕ್ಷತೆಯೊಂದಿಗೆ ಹಬ್ಬವನ್ನು ಸಂಭ್ರಮಿಸೋಣ!
ಎಚ್ಚರಿಕೆ ಇರಲಿ – ಸೈಬರ್ ಸುರಕ್ಷತೆ ನಮ್ಮದಾಗಲಿ! @BlrCityPolice @ablesbpura @AcpKengeri
#CyberSafeDeepavali #CyberAwareness #SayNoToCyberCrime #BengaluruCityPolice #DcpSouthwest
ಏಕೀಕೃತ ಭಾರತದ ನಿರ್ಮಾತೃ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿ, ಸಂಕಲ್ಪ ಮತ್ತು ರಾಷ್ಟ್ರದ ಏಕತೆಗಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸೋಣ.
ಸಾಮರಸ್ಯ, ಶಕ್ತಿ ಮತ್ತು ಸಾಮಾನ್ಯ ಉದ್ದೇಶದೊಂದಿಗೆ ನಾವೆಲ್ಲರೂ ಒಂದಾಗಿ ನಿಲ್ಲೋಣ.
🤝 ಏಕತೆಯೇ ನಮ್ಮ ಶಕ್ತಿ, ಏಕತೆಯೇ ನಮ್ಮ ಭದ್ರತೆ! @BlrCityPolice @JointCPWest
#NationalUnityDay #RashtriyaEktaDiwas #SardarVallabhbhaiPatel #BengaluruCityPolice #SouthWestDivision
🤖 Made with AI
DCP KENGERI (South-West) Bengaluru City retweeted
🚸 ಸುರಕ್ಷಿತ ಬಾಲ್ಯ – ಸುರಕ್ಷಿತ ಭವಿಷ್ಯ 🚸
ತಲಘಟ್ಟಪುರ ಪೊಲೀಸ್ ಠಾಣೆ ವತಿಯಿಂದ ಈ ದಿನ # ಸಿದ್ದಗಂಗಾ ಪ್ರೌಢಶಾಲೆ ರಘುವನಹಳ್ಳಿಯಲ್ಲಿ “ಸುರಕ್ಷಿತ ಬಾಲ್ಯ” ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. @BlrCityPolice @DCPSOUTHWESTBCP
🚫 #BedaBro | #Sanmitra | #RISE
🤝 ಸನ್ಮಿತ್ರ – ವ್ಯಸನಮುಕ್ತ ಬದುಕಿನತ್ತ ಒಂದು ಹೆಜ್ಜೆ!
ಮಾದಕ ವ್ಯಸನವನ್ನು ನಿಯಂತ್ರಿಸಿ, ವ್ಯಸನದಿಂದ ತೊಂದರೆಗೊಳಗಾದವರನ್ನು ವ್ಯಸನಮುಕ್ತರನ್ನಾಗಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಎಂಬ ವಿಶೇಷ ಸಾಮಾಜಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
💚 ವ್ಯಸನಕ್ಕೆ “ಬೇಡ” ಎನ್ನಿ, ಆರೋಗ್ಯಕರ ಬದುಕಿಗೆ “ಹೌದು” ಎನ್ನಿ!
@BlrCityPolice @JointCPWest
#BedaBro #Sanmitra #RISE #SayNoToDrugs #BengaluruCityPolice #dcpsouthwest
🚨 ಹೊಯ್ಸಳ 246 ಪೊಲೀಸರ ಸಮಯಪ್ರಜ್ಞೆ – ತಪ್ಪಿದ ಭಾರೀ ಅನಾಹುತ! 👏
@kumbalaguduPS ವ್ಯಾಪ್ತಿಯ ಕುಂಬಳಗೋಡು ಟವರ್ ಸಮೀಪದ ಶೆಡ್‌ನಲ್ಲಿ ಗೋಬಿ ಮಂಚೂರಿ ತಯಾರಿಸುವ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬೆಂಕಿ ಉರಿಯುತ್ತಿದ್ದ ಬಗ್ಗೆ ಕಾರ್ಮಿಕರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು,
ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ 246ರ ಕರ್ತವ್ಯ ನಿರತ ಅಧಿಕಾರಿ ಎ.ಎಸ್.ಐ. ಶಶಿಕುಮಾರ್ ಹಾಗೂ ಸಿಬ್ಬಂದಿ ಖಾಜಾ ಅಮೀನ ವಾಲಿಕಾರ್ ಅವರು ಸ್ಥಳಕ್ಕೆ ಧಾವಿಸಿ, ಒದ್ದೆಯಾದ ಗೋಣಿಚೀಲವನ್ನು ಬಳಸಿ ಸಿಲಿಂಡರ್‌ನಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿ, ತ್ವರಿತ ಕಾರ್ಯಾಚರಣೆ ಮೂಲಕ ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಯಲ್ಲಿ ಸಮಯಪ್ರಜ್ಞೆ ಮೆರೆದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾಗಿದೆ. 👏🚔 @BlrCityPolice @jt_cpwestbcp @JointCPWest @AcpKengeri
ತುರ್ತು ಸಂಧರ್ಭದಲ್ಲಿ 112ಕ್ಕೆ ಕರೆ ಮಾಡಿ, ನಿಮ್ಮ ಸುರಕ್ಷತೆ ನಮ್ಮ ಆದ್ಯತೆ.
#Hoysala112 #BengaluruCityPolice #DCPsouthwest #PublicSafety
🎮 ಮಕ್ಕಳ ಆನ್‌ಲೈನ್ ಗೇಮಿಂಗ್ OnlineGaming ಮೇಲೆ ನಿಗಾ ಇರಲಿ!
ಮಕ್ಕಳ ಅತಿಯಾದ ಆನ್‌ಲೈನ್ ಗೇಮಿಂಗ್ ಅಭ್ಯಾಸವು ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹಣ ಪಾವತಿಸುವ ಆಟಗಳು, ಆನ್‌ಲೈನ್ ಬೆಟ್ಟಿಂಗ್ ಹಾಗೂ ಸೈಬರ್ ವಂಚನೆಗಳ ಬಗ್ಗೆ ಎಚ್ಚರ ವಹಿಸಿ. ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ಅವರ ಭವಿಷ್ಯವನ್ನು ಸುರಕ್ಷಿತವಾಗಿರಿಸಿ!
📞 ತುರ್ತು ಸಹಾಯಕ್ಕಾಗಿ 112 ಗೆ ಕರೆ ಮಾಡಿ.
@BlrCityPolice @JointCPWest @CPBlr @DgpKarnataka
#CyberSafety #OnlineGaming #ChildSafety #BengaluruCityPolice #DCPsouthwest
1
131
🙏🌿 ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು! 🌿🙏
ಸಮಸ್ತ ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
ಮಹಾಕಾವ್ಯ ರಾಮಾಯಣದ ಮೂಲಕ ಸತ್ಯ, ಧರ್ಮ, ಕರ್ತವ್ಯ, ಮಾನವೀಯತೆ ಹಾಗೂ ಸದಾಚಾರದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ. @BlrCityPolice @JointCPWest
#MaharshiValmikiJayanti #DCPsouthwest #BengaluruCityPolice #SouthWestDivision




















