ಬಿಸಿಲೂರು ಈಗ ಹಸಿರೂರು..
ವಿಜಯಪುರ ಜಿಲ್ಲೆಯ ಹಸಿರು ಹೆಜ್ಜೆಗಳ ಫಲಶ್ರುತಿ ಇದೀಗ ಜಗತ್ತಿನೆದುರು ಕಾಣುತ್ತಿದೆ. 10 ವರ್ಷಗಳ ನಮ್ಮ ನಿರಂತರ ಪ್ರಯತ್ನ ಸಾಕಾರಗೊಳ್ಳುತ್ತಿದೆ. ವಿಜಯಪುರ ಕೂಲ್ ಆಗುತ್ತಿದೆ. ಎಲ್ಲೆಡೆ ಹಸಿರು ಕಂಗೊಳಿಸುತ್ತಿದೆ.
ಬಿಸಿಲ ಝಳ ಕಡಿಮೆಯಾಗುತ್ತಿದೆ, ಮಳೆ ಸಿಂಚನ ಕ್ರಮೇಣ ಹೆಚ್ಚುತ್ತಿದೆ. ಮಾನವ ಪ್ರಯತ್ನಕ್ಕೆ ಯಾವುದೇ ಮಿತಿಯಿಲ್ಲ ಎಂಬುದು ವಿಜಯಪುರದ ಹಸಿರು ಕ್ರಾಂತಿಯಿಂದ ಮತ್ತೊಮ್ಮೆ ಸಾಬೀತಾಗಿದೆ.
#kotivrikshaabhiyana #ಕೋಟಿವೃಕ್ಷಅಭಿಯಾನ #ಪಂಚಕೋಟಿವೃಕ್ಷಅಭಿಯಾನ
ಬೆಂಗಳೂರು ಅಭಿವೃದ್ಧಿಗೆ ಮುಂದಿನ 10–15 ವರ್ಷಗಳ ಸಮಗ್ರ ಯೋಜನೆ!
ಸಂಪೂರ್ಣ ಬೆಂಗಳೂರು ನಗರ ಜಿಲ್ಲೆ ವ್ಯವಸ್ಥಿತ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್!
9ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್ಶಿಪ್ ಗಳು - AI City ನಿರ್ಮಾಣ
ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಸಲಹಾ ಸಮಿತಿ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪಾಲ್ಗೊಂಡಿದ್ದೆ.
ಬೆಂಗಳೂರು ನಗರದ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು, ಮುಂದಿನ 10-15 ವರ್ಷಗಳ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಕಾರ್ಯತಂತ್ರಗಳು, ಆದ್ಯತೆಗಳು ಮತ್ತು ಮುಂದಿನ ಹೆಜ್ಜೆಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.
2047ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಬೆಳೆಸುವ ಗುರಿಗೆ ಪೂರಕವಾಗಿ, ಬೆಂಗಳೂರು ಮಹಾನಗರ ಪ್ರದೇಶವನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾದ ಪ್ರಮುಖ ಅಂಶಗಳು:
🔹 ಸುಗಮ ಸಂಚಾರ ವ್ಯವಸ್ಥೆ: 2037ರ ವೇಳೆಗೆ ಹೆಚ್ಚುವರಿ 312 ಕಿ.ಮೀ. ಮೆಟ್ರೋ ಸಂಪರ್ಕ, 72 ಕಿ.ಮೀ. ಸಬ್ಅರ್ಬನ್ ರೈಲು ಸಂಪರ್ಕ ಹಾಗೂ 210 ಕಿ.ಮೀ. ವರ್ತುಲ ರಸ್ತೆ ಸೇರಿದಂತೆ ಹಲವು ಪ್ರಮುಖ ಸಾರಿಗೆ ಯೋಜನೆಗಳಿಗೆ ಆದ್ಯತೆ ನೀಡುವ ಉದ್ದೇಶ.
🔹 ನೀರಿನ ಭದ್ರತೆ: ಬೆಂಗಳೂರು ನಗರ ಜಿಲ್ಲೆಯಾದ್ಯಂತ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ವಿಸ್ತರಿಸುವುದು, ಸಂಸ್ಕರಿಸಿದ ನೀರಿನ ಮರುಬಳಕೆ ಹಾಗೂ ಕೆರೆಗಳನ್ನು ತುಂಬಿಸುವ ಮೂಲಕ ದೀರ್ಘಾವಧಿಯ ನೀರಿನ ಭದ್ರತೆಗೆ ಒತ್ತು.
🔹 ಕೈಗಾರಿಕಾ ಅಭಿವೃದ್ಧಿ: ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ನಿಟ್ಟಿನಲ್ಲಿ 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್ಶಿಪ್ಗಳು ಹಾಗೂ AI City ನಿರ್ಮಾಣದಂತಹ ಯೋಜನೆಗಳಿಗೆ ಆದ್ಯತೆ.
🔹 ವಸತಿ ಸೌಲಭ್ಯ: ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 6-6.5 ಲಕ್ಷ ವಸತಿ ಘಟಕಗಳ ನಿರ್ಮಾಣ ಹಾಗೂ ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವ 40–50 ಸಾವಿರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ.
ಇಂದಿನ ಬೆಂಗಳೂರಿನ ಸಮಸ್ಯೆಗಳಿಗೆ ಮಾತ್ರ ಪರಿಹಾರ ಹುಡುಕುವುದಲ್ಲ; ಮುಂದಿನ ಪೀಳಿಗೆಯ ಬೆಂಗಳೂರು ಹೇಗಿರಬೇಕು ಎಂಬ ದೂರದೃಷ್ಟಿಯೊಂದಿಗೆ ಯೋಜನೆ ರೂಪಿಸುವುದು ನಮ್ಮ ಉದ್ದೇಶ.
ಸುಗಮ ಸಂಚಾರ • ಸಮರ್ಪಕ ನೀರು • ಕೈಗೆಟಕುವ ವಸತಿ • ಕೈಗಾರಿಕಾ ಬೆಳವಣಿಗೆ • ಹೊಸ ಉದ್ಯೋಗಗಳು- ಇವೆಲ್ಲವನ್ನೂ ಒಳಗೊಂಡ ಸಮಗ್ರ, ಸುಸ್ಥಿರ ಹಾಗೂ ಭವಿಷ್ಯಮುಖಿ ಬೆಂಗಳೂರಿನ ನಿರ್ಮಾಣದತ್ತ ನಮ್ಮ ಹೆಜ್ಜೆ.
@CMofKarnataka @DKShivakumar @krishnabgowda @PriyankKharge @byrathi_suresh
ಸಿಂಗಾಪುರದ ಉದ್ಯಮಗಳಿಗೆ ಕರ್ನಾಟಕದಲ್ಲಿ ಹೊಸ ಅವಕಾಶಗಳ ಹೆಬ್ಬಾಗಿಲು!
ಸಿಂಗಾಪುರದ ಪ್ರಮುಖ ವಾಣಿಜ್ಯ ಸಂಸ್ಥೆಯಾದ Singapore Business Federation (SBF)ನ ಅಧ್ಯಕ್ಷರಾದ ಶ್ರೀ ಪ್ರಸೂನ್ ಮುಖರ್ಜಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸಮಂತಾ ಟಿಯೊ ಅವರೊಂದಿಗೆ ಮಹತ್ವದ ಸಭೆ ನಡೆಸಿದೆವು.
34,000ಕ್ಕೂ ಅಧಿಕ ಕಂಪನಿಗಳನ್ನು ಪ್ರತಿನಿಧಿಸುವ SBF, ಆಗ್ನೇಯ ಏಷ್ಯಾದ ಹೊರಗೆ ತನ್ನ ಮೊದಲ Singapore Enterprise Centre ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿರುವುದು ಕರ್ನಾಟಕದ ಮೇಲಿನ ವಿಶ್ವಾಸಕ್ಕೆ ಮಹತ್ವದ ಸಾಕ್ಷಿಯಾಗಿದೆ.
ಸಿಂಗಾಪುರ–ಕರ್ನಾಟಕ ನಡುವಿನ ಹೂಡಿಕೆ, ಉದ್ಯಮ ವಿಸ್ತರಣೆ ಹಾಗೂ ಗಡಿದಾಟಿನ ವ್ಯಾಪಾರ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಫಲಪ್ರದ ಚರ್ಚೆ ನಡೆಸಿದೆವು.
ಈ ಸಂದರ್ಭದಲ್ಲಿ 2027ರಲ್ಲಿ ನಡೆಯಲಿರುವ #GIM2027 ಕ್ಕೆ SBF ಹಾಗೂ ಅದರ ಸದಸ್ಯರನ್ನು ಆತ್ಮೀಯವಾಗಿ ಆಹ್ವಾನಿಸಿದೆವು.
#InvestKarnataka #KarnatakaInSingapore #GIM2027
#SingaporeBusinessFederation
Engaging Singapore Business Federation to Expand Investment Opportunities in Karnataka!
Held discussions with Mr. Prasoon Mukherjee, Chairman, SBF-India Business Council, and Ms. Samantha Teo, Executive Director, SAMEA Region, Singapore Business Federation (SBF), representing over 34,000 companies.
We discussed deepening Singapore–Karnataka business and investment ties, building on SBF’s Singapore Enterprise Centre in Bengaluru, established in 2025 as its first centre outside Southeast Asia. SBF appreciated the support extended in setting up the Centre, which enables Singapore companies to enter and expand in India through market advisory, networking, business matching and on-ground support.
We invited SBF and its member companies to #GIM2027 to explore opportunities across manufacturing, emerging industries and other sectors, with a shared focus on investment, industry-academia collaboration and high-value job creation for our people.
#InvestKarnataka #KarnatakaInSingapore #GIM2027
#SingaporeBusinessFederation
Hidayath Addoor retweeted
ಮಾನ್ಯ ಮುಖ್ಯಮಂತ್ರಿ @DKShivakumar ರವರೇ,
ಅನಿವಾಸಿ ಭಾರತೀಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಅನಿವಾಸಿ ಭಾರತೀಯ ಸಮಿತಿಗೆ ಸಚಿವರನ್ನು ಯಾವಾಗ ನೇಮಿಸುತ್ತೀರಿ
ರಾಜ್ಯದ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿರುವ ಅನಿವಾಸಿಗಳ ಧ್ವನಿಗೆ ಗೌರವ ನೀಡಿ
#NRIMinistry #AnivasiKannadigaru #NRIAppealDay – at Bengaluru South, India
Hidayath Addoor retweeted
I have officially filed my candidature for the post of President, Dakshina Kannada District Congress Committee.
With your blessings, support, and encouragement, I look forward to serving our organisation and strengthening the Congress in our district.
I humbly seek your support
Hidayath Addoor retweeted
ಸದಾಶಿವನಗರ ನಿವಾಸದಲ್ಲಿಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಹೆಚ್.ಎಂ ರೇವಣ್ಣ ಅವರ ನೇತೃತ್ವದ ಮಾಗಡಿ ತಾಲೂಕು ರೇಷ್ಮೆ ಹುರಿ ಕಾರ್ಖಾನೆ ಯಂತ್ರಗಳ ಮಾಲೀಕರ ಸಂಘದವರು ಭೇಟಿ ಮಾಡಿ, ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು.
Hidayath Addoor retweeted
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar @kharge @hariprasadbk2 #NRIMinistry
Hidayath Addoor retweeted
Congratulations to CM @dkshivakumar for announcing the NRI Ministry.
This has been a decades long aspiration of millions of NonResident Kannadigas.
Please establish it without delay.
@kharge @haripasadbk2 @rssurjewala
#NRIMinistry
Hidayath Addoor retweeted
30 ಲಕ್ಷ ಅನಿವಾಸಿ ಕನ್ನಡಿಗರ ಆಶಯಕ್ಕೆ ಗೌರವ ನೀಡಿ ಸಚಿವಾಲಯ ಘೋಷಿಸಿದ @dkshivakumar ಅವರಿಗೆ ಧನ್ಯವಾದಗಳು.
ಅನಿವಾಸಿ ಸಚಿವಾಲಯ ಸ್ಥಾಪನೆ ಶೀಘ್ರದಲ್ಲಿ ಆಗಲಿ, ಅನಿವಾಸಿಗಳನ್ನು ಪ್ರತಿನಿಧಿಸಲು ಡಾ. ಆರತಿ ಕೃಷ್ಣ ಸೂಕ್ತ.
@siddaramaiah @kharge @hariprasadbk2 #NRIMinistry
Hidayath Addoor retweeted
ಬೇಸಿಗೆಯ ಸವಾಲುಗಳ ನಡುವೆಯೂ ಕೆಎಂಎಫ್ ಮಹತ್ವದ ಮೈಲಿಗಲ್ಲು ದಾಖಲಿಸಿದೆ. ಅನ್ನದಾತರ ಪರಿಶ್ರಮದಿಂದ ನಿತ್ಯ 1 ಕೋಟಿ ಲೀಟರ್'ಗೂ ಹೆಚ್ಚು ಹಾಲು ಸಂಗ್ರಹಿಸಿದ್ದು, ಈ ಪೈಕಿ ಬಮೂಲ್'ನಿಂದ 17 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ.
ಬಮೂಲ್, ಹಾಸನ, ಮಂಡ್ಯ, ತುಮಕೂರು ಹಾಗೂ ಮೈಸೂರು ಹಾಲು ಒಕ್ಕೂಟಗಳ ಸಾಧನೆ ರಾಜ್ಯದ ಹೈನುಗಾರಿಕಾ ಶಕ್ತಿಗೆ ಸಾಕ್ಷಿಯಾಗಿದೆ.
#NammaNandini #Bamul
Hidayath Addoor retweeted
Yoga is one of India’s greatest gifts to the world. Rooted in our ancient wisdom, it teaches us that true well being comes from harmony between body, mind and spirit. On International Yoga Day, let us reaffirm our commitment to healthier, calmer and more mindful lives, and carry forward this timeless legacy for future generations.
Hidayath Addoor retweeted
ಕನಕಪುರ ರೋಟರಿ ಸಂಸ್ಥೆಯ ವತಿಯಿಂದ ಕನಕಪುರ ತಾಲೂಕಿನ 4,000 ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ನೋಟ್ಬುಕ್ಗಳನ್ನು ವಿತರಿಸಲಾಯಿತು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ರೋಟರಿ ಸಂಸ್ಥೆಯವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರೀ ಶಿವಗಿರಿ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಅನ್ನದಾನೇಶ್ವರ ಸ್ವಾಮೀಜಿಯವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ರವಿ, ಬಿಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ಶ್ರೀ ಎಂ.ಡಿ. ವಿಜಯ್ ದೇವ್ ಹಾಗೂ ಕನಕಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮತ್ತಿಗೌಡ ಅವರು ಉಪಸ್ಥಿತರಿದ್ದರು.
ಆಲಮಟ್ಟಿ ಜಲಾಶಯ ಎತ್ತರದ ಹಿನ್ನೀರಿನಿಂದ ಬಾಧಿತವಾಗುವ ಎಲ್ಲ ಗ್ರಾಮಸ್ಥರ ಹಿತ ಕಾಪಾಡಲು ಬದ್ಧ
ಆಲಮಟ್ಟಿ ಜಲಾಶಯವನ್ನು 524.256 ಮೀಟರ್ ಗೆ ಎತ್ತರಿಸುವುದರಿಂದ ಅಣೆಕಟ್ಟೆಯ ಹಿನ್ನೀರಿನಲ್ಲಿ ಒಟ್ಟು 75,563 ಎಕರೆ ಭೂಮಿ ಮುಳುಗಡೆಯಾಗುವ ಸಾಧ್ಯತೆಯಿದೆ. ಈ ಯೋಜನೆಯಿಂದ ಬಾಧಿತವಾಗುವ ಪ್ರತಿಯೊಬ್ಬ ರೈತ ಬಾಂಧವರ ಹಿತ ಕಾಪಾಡಲು ನಾನು ಮತ್ತು ನಮ್ಮ ಸರ್ಕಾರ ಸಂಪೂರ್ಣ ಬದ್ಧರಾಗಿದ್ದೇವೆ.
ವಿಜಯಪುರದ ನಮ್ಮ ಗೃಹ ಕಚೇರಿಯಲ್ಲಿ ಇಂದು ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ರೈತರೊಂದಿಗೆ ಸುದೀರ್ಘ ಸಭೆ ನಡೆಸಿ, ಅವರ ಸಮಸ್ಯೆಗಳು, ಆತಂಕಗಳು ಮತ್ತು ಬೇಡಿಕೆಗಳನ್ನು ಆಲಿಸಿದೆ.
ಈ ಹಿಂದೆ ಪ್ರತಿ ಎಕರೆ ಒಣಬೇಸಾಯ ಜಮೀನಿಗೆ ₹8 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹12 ಲಕ್ಷ ಪರಿಹಾರ ನಿಗದಿಯಾಗಿತ್ತು. ಆದರೆ ರೈತರ ಹಿತದೃಷ್ಟಿಯಿಂದ ಒಣಬೇಸಾಯ ಜಮೀನಿಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ನಿಗದಿಪಡಿಸಲು, ಅಂದಿನ ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಗಮನ ಸೆಳೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ.
ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಬಬಲೇಶ್ವರ ತಾಲೂಕು ಸೇರಿದಂತೆ ಒಟ್ಟು 49 ಗ್ರಾಮಗಳ ಸುಮಾರು 15,000 ಎಕರೆ ಜಮೀನಿಗೆ ಅಂದಾಜು ₹3,000 ಕೋಟಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿವಿಧ ಹಂತಗಳ ಅಧಿಸೂಚನೆಗಳನ್ನು ಹೊರಡಿಸಲು ಕಾರ್ಯೋನ್ಮುಖನಾಗಿದ್ದೇನೆ.
ಈ ಭಾಗದ ಅಸ್ಮಿತೆಯಾಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗಿದೆ. ಸಂಕಷ್ಟದಲ್ಲಿರುವ ಕಾರ್ಖಾನೆಯ ಉಳಿವಿಗಾಗಿ ವಿಶೇಷ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಇಂಧನ ಸಚಿವ ಶ್ರೀ ಕೆ.ಜೆ. ಜಾರ್ಜ್ ಅವರೊಂದಿಗೆ ಚರ್ಚಿಸಿ ಕೆಇಆರ್ಸಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಕ್ರಮ ಕೈಗೊಂಡಿದ್ದೇನೆ.
ಯುಕೆಪಿ 3ನೇ ಹಂತದ ಈ ಮಹತ್ವಾಕಾಂಕ್ಷಿ ಯೋಜನೆ ಸಂಪೂರ್ಣವಾಗಿ ಜಾರಿಯಾಗುವವರೆಗೂ ರೈತರ ಪರವಾಗಿ ನಿಂತು ಕೆಲಸ ಮಾಡುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿ. ಯಾವುದೇ ರೈತನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ನಾನು ನಿರಂತರವಾಗಿ ಶ್ರಮಿಸುತ್ತೇನೆ.
ಸಭೆಯಲ್ಲಿ ಶ್ರೀ ಅದೃಶ್ಯಪ್ಪ, ಶ್ರೀ ರಾಜೇಂದ್ರ ದೇಸಾಯಿ, ಶ್ರೀ ಶಂಕರಗೌಡ ಪಾಟೀಲ (ಶಿರಬೂರ), ಶ್ರೀ ವಿ.ಎಚ್. ಬಿದರಿ, ಶ್ರೀ ಕೆ.ಸಿ. ದೇಸಾಯಿ, ಶ್ರೀ ಅಶೋಕ ಮಲಘಾಣ, ಶ್ರೀ ಕುಮಾರ ದೇಸಾಯಿ, ಶ್ರೀ ರಾಮಚಂದ್ರ ಕೊಡಬಾಗಿ, ಶ್ರೀ ಬಿ.ಡಿ. ಪಾಟೀಲ, ಶ್ರೀ ಬಿ.ಆರ್. ದೇಸಾಯಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
#UKP
Hidayath Addoor retweeted
A delegation of Non-Resident Kannadigas representing 30 countries, led by Food & Civil Supplies and Consumer Affairs Minister Shri K.H. Muniyappa met me at Vidhana Soudha today.
Kannadigas across the world have carried our language, culture and values to every corner of the globe while making significant contributions in diverse fields. Their achievements and enduring connection to Karnataka are a source of pride and inspiration for us all.
I was pleased to interact with the delegation and hear their perspectives, ideas and aspirations for the future of our state. The Government of Karnataka remains committed to strengthening its engagement with the global Kannada community and harnessing their knowledge, expertise and goodwill to build a stronger, more prosperous and globally connected Karnataka.
Hidayath Addoor retweeted
Karnataka at the Heart of Apple’s Global Supply Chain & Manufacturing
Delighted to share that Foxconn has commenced production of the latest iPhone 17 at its new facility in Devanahalli, Bengaluru — now the largest Foxconn unit outside China. With an investment of ₹25,000 crore, this advanced plant will generate thousands of jobs, strengthen supply chains, and boost India’s export ambitions.
This milestone marks Karnataka’s rise as a global hub for electronics manufacturing, with Bengaluru powering Apple’s growth in India and positioning our state as a key player in the world’s technology and manufacturing future.
#FOXCONN #FoxconnIndia #iphone17
Hidayath Addoor retweeted
Booth committees, youth teams, grassroots workers—all united behind Suhail Kandak.
Let’s make this people’s choice official.
@INCKarnataka @DKShivakumar
#SuhailforDk
#SuhailForDCC
Hidayath Addoor retweeted
How it started vs How it always ends.
This girl is now playing women card saying she is pregnant and she did it in a panic.
What you guys think should we let her go ?
Hidayath Addoor retweeted
ಕೇವಲ ಎಸ್ಪಿ, ಕಮಿಷನರ್ ಬದಲಾವಣೆ ಸಾಲದು!
ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಬೀಡುಬಿಟ್ಟಿರುವ ಕೋಮು ಮನಸ್ಥಿತಿಯ ಪೋಲೀಸ್ ಸಿಬ್ಬಂದಿಗಳ ಶೀಘ್ರ ವರ್ಗಾವಣೆ ಅತ್ಯಗತ್ಯ!
@kharge @BZZameerAhmedK ತಕ್ಷಣ ಕ್ರಮ ಕೈಗೊಳ್ಳಿ
#CoastalKarnataka
#MuslimsLivesMatters
Hidayath Addoor retweeted
, @priyankagandhi Are u aware that the Karnataka govt turns a blind eye to:
Mob lynching! Communal hate speech! Murders of innocent Muslims?
Home Minister, In-charge Minister have failed miserably
How long will this silence last?
#CoastalKarnataka
#MuslimsLivesMatters







































